alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಆಲಸಿ ದೇಶಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ…?

ವಿಶ್ವ ಆರೋಗ್ಯ ಸಂಸ್ಥೆ ವಿಶ್ವದ ಆಲಸಿ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಬ್ಲ್ಯೂಎಚ್ಒ ಬಿಡುಗಡೆ ಮಾಡಿದ ವರದಿ ಪ್ರಕಾರ, ವಿಶ್ವದಲ್ಲಿ ನಾಲ್ಕರಲ್ಲಿ ಒಬ್ಬರು ನಿಯಮಿತ ರೂಪದಲ್ಲಿ ವ್ಯಾಯಾಮ ಮಾಡುವುದಿಲ್ಲವಂತೆ. 168 ದೇಶಗಳ ಪೈಕಿ ಉಗಾಂಡಾ ಅತ್ಯಂತ ಶಕ್ತಿಯುತ ದೇಶವಂತೆ. ಈ ಪಟ್ಟಿಯಲ್ಲಿ ಕುವೈತ್ ಕೊನೆ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ಅಮೆರಿಕಾ 143 ನೇ ಸ್ಥಾನದಲ್ಲಿದೆ. ಯುಕೆ 123 ನೇ ಸ್ಥಾನದಲ್ಲಿದೆ. ಸಿಂಗಾಪುರ 126 ನೇ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾ 97ನೇ ನಂಬರ್ ನಲ್ಲಿದೆ. ಉಗಾಂಡಾದಲ್ಲಿ ಶೇಕಡಾ 5.5 ಮಂದಿ ಮಾತ್ರ ನಿಯಮಿತ ರೂಪದಲ್ಲಿ ವ್ಯಾಯಾಮ ಮಾಡುವುದಿಲ್ಲವಂತೆ.

ಭಾರತ 117 ನೇ ಸ್ಥಾನದಲ್ಲಿದೆ. ಫಿಲಿಫೈನ್ಸ್ 141ನೇ ಸ್ಥಾನದಲ್ಲಿದೆ. ಬ್ರೇಜಿಲ್ 164ನೇ ನಂಬರ್ ನಲ್ಲಿದೆ. ದಿನದಲ್ಲಿ 75 ನಿಮಿಷವಾದ್ರೂ ವ್ಯಾಯಾಮ ಮಾಡುವ ಜನರನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ ಈ ಪಟ್ಟಿ ಸಿದ್ಧಪಡಿಸಿದೆ. ಅನೇಕ ದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರು ಕಡಿಮೆ ಸಕ್ರಿಯರಾಗಿರ್ತಾರಂತೆ. ಶ್ರೀಮಂತ ದೇಶಕ್ಕೆ ಹೋಲಿಸಿದ್ರೆ ಬಡ ದೇಶಗಳ ಜನರು ಹೆಚ್ಚು ಸಕ್ರಿಯವಾಗಿರುತ್ತಾರಂತೆ. ದೈಹಿಕ ಚಟುವಟಿಕೆ ಅನೇಕ ದೇಶದ ಜನರಿಗೆ ಅತ್ಯಗತ್ಯವೆಂದು ವರದಿಯಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...