alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಕ್ಕಿ ಸಾವಿಗೆ ಕಾರಣವಾಯ್ತು ಸರ್ಕಾರದ ಹೋರ್ಡಿಂಗ್

ಅಮೆರಿಕದಲ್ಲಿ ನೆಲೆಸಿರುವ 32 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ರಘುಪತಿ ಕಂದಸ್ವಾಮಿ, ವಧು ವೀಕ್ಷಣೆಗಾಗಿ ತಮಿಳುನಾಡಿನ ಕೊಯಂಬತ್ತೂರಿಗೆ ಬಂದಿದ್ದ. ಅಕ್ರಮವಾಗಿ ಹಾಕಿದ್ದ ಮರದ ಹೋರ್ಡಿಂಗ್ ಗೆ ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ.

ಆಡಳಿತಾರೂಢ ಎಐಎಡಿಎಂಕೆ ಪಕ್ಷ ಎಂಜಿಆರ್ ಶತಮಾನೋತ್ಸವ ಆಚರಣೆಗಾಗಿ ಈ ಹೋರ್ಡಿಂಗ್ ಹಾಕಿತ್ತು. ಹೋರ್ಡಿಂಗ್ ಗೆ ಬೈಕ್ ಡಿಕ್ಕಿಯಾಗಿ ರಘುಪತಿ ಕೆಳಕ್ಕೆ ಬಿದ್ದಿದ್ದಾನೆ. ಆತನ ಮೈಮೇಲೆ ಲಾರಿ ಹರಿದು ದುರಂತ ಸಂಭವಿಸಿದೆ.

ಮೂರ್ನಾಲ್ಕು ದಿನಗಳ ಹಿಂದಷ್ಟೆ ಭಾರತಕ್ಕೆ ಬಂದಿದ್ದ ರಘುಪತಿ, ಅಪಘಾತ ನಡೆದ ಸಂದರ್ಭದಲ್ಲಿ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಬಸ್ ನಿಲ್ದಾಣದಲ್ಲಿ ಬೈಕ್ ಪಾರ್ಕ್ ಮಾಡಿ, ಅಲ್ಲಿಂದ ಬಸ್ ಏರಿ ದೇವಸ್ಥಾನಕ್ಕೆ ತೆರಳಲು ರಘುಪತಿ ಆಗಮಿಸಿದ್ದ.

ರಘುಪತಿ ಸಾವಿನ ಬಗ್ಗೆ ಸಾಮಾಜಿಕ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಹು ಕಿಲ್ಡ್ ರಘು’ ಅನ್ನೋ ಹೆಸರಲ್ಲಿ ಸರ್ಕಾರದ ವಿರುದ್ಧ ಅಭಿಯಾನವೇ ನಡೆಯುತ್ತಿದೆ. ರಘುಪತಿ ಸಾವು ತಮಿಳುನಾಡಿನಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಟೆಕ್ಕಿ ಸಾವಿಗೆ ಲಾರಿ ಹರಿದಿದ್ದೇ ಕಾರಣ, ಹೋರ್ಡಿಂಗ್ ಅಲ್ಲವೆಂದು ಸರ್ಕಾರ ವಾದಿಸುತ್ತಿದೆ. ಡಿಎಂಕೆ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಅನ್ನೋದು ಸರ್ಕಾರದ ಆರೋಪ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...