alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಕೇಸ್ ಗೆ ವಿಚಿತ್ರ ತಿರುವು

ಅತ್ಯಾಚಾರ ಸಂತ್ರಸ್ಥೆ, ಚಂಡೀಗಢದ 10 ವರ್ಷದ ಬಾಲಕಿ ಕಳೆದ ತಿಂಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತಾ ಅನ್ನೋ ಅನುಮಾನ ಈಗ ಬಲವಾಗಿದೆ. ಯಾಕಂದ್ರೆ ಆರೋಪಿಯಾಗಿರೋ ಬಾಲಕಿಯ ಚಿಕ್ಕಪ್ಪನ ಡಿಎನ್ಎ ಮಗುವಿನ ಜೊತೆ ಹೊಂದಾಣಿಕೆಯಾಗುತ್ತಿಲ್ಲ.

ಸಿಎಫ್ಎಸ್ಎಲ್ ವರದಿಯ ಬೆನ್ನಲ್ಲೇ ಮತ್ತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆದು ಎರಡು ತಿಂಗಳ ಬಳಿಕ ಆಕೆ ಗರ್ಭಿಣಿ ಅನ್ನೋದು ಬೆಳಕಿಗೆ ಬಂದಿತ್ತು. ಆದ್ರೀಗ ಮಗುವಿನ ಡಿಎನ್ಎ ಆರೋಪಿ ಜೊತೆಗೆ ಮ್ಯಾಚ್ ಆಗದೇ ಇರೋದ್ರಿಂದ ಈ ಕೃತ್ಯದಲ್ಲಿ ಇನ್ಯಾರು ಭಾಗಿಯಾಗಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ.

ಜುಲೈ 14 ರಂದು ಬಾಲಕಿಯ ಚಿಕ್ಕಪ್ಪನನ್ನು ಬಂಧಿಸಲಾಗಿತ್ತು. ಆತನೇ ಆರೋಪಿ ಅನ್ನೋದನ್ನು ಬಾಲಕಿ ಕೂಡ ಕೋರ್ಟ್ ನಲ್ಲಿ ದೃಢಪಡಿಸಿದ್ಲು. 7 ಬಾರಿ ತಾನು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆತನೂ ತಪ್ಪೊಪ್ಪಿಕೊಂಡಿದ್ದ. ಈ ಕೃತ್ಯದಲ್ಲಿ ಇತರರು ಕೂಡ ಭಾಗಿಯಾಗಿರುವ ಬಗ್ಗೆ ನೊಂದ ಬಾಲಕಿ ಯಾವುದೇ ಮಾಹಿತಿ ನೀಡಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...