alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಯುಷ್ಮಾನ್ ಭಾರತ್’ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ

50 ಕೋಟಿ ಜನರಿಗೆ ವಾರ್ಷಿಕ ತಲಾ 4 ಲಕ್ಷ ರೂ. ವಿಮೆ ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಯುಷ್ಮಾನ್ ಭಾರತ್ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯ ಮಹಾ ನಿರ್ದೇಶಕರು ಶ್ಲಾಘಿಸಿದ್ದು, ಇದೊಂದು ಮಹಾನ್ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.

ಈ ಮಹತ್ವಾಕಾಂಕ್ಷಿ ಯೋಜನೆ ವಿಶ್ವದಲ್ಲೇ ಅತಿ ದೊಡ್ಡದು ಎಂದು ಹೇಳಲಾಗುತ್ತಿದ್ದು, ದೇಶದ 10 ಕೋಟಿ ಬಡ ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ಗುರಿ ಹೊಂದಿದೆ.

“ಆಯುಷ್ಮಾನ್ ಭಾರತ ಅಥವಾ ಸಾರ್ವತ್ರಿಕ ಆರೋಗ್ಯ ಕವರೇಜ್ ಕುರಿತ ಭಾರತದ ಉಪಕ್ರಮ ತುಂಬಾ ಪ್ರಭಾವಶಾಲಿಯಾಗಿದೆ! ಧನ್ಯವಾದ ಪ್ರಧಾನಿ ನರೇಂದ್ರ ಮೋದಿ. ನನ್ನನ್ನು ಇಂದು ಭೇಟಿ ಮಾಡಿದ್ದಕ್ಕಾಗಿ ಧನ್ಯವಾದ ಆರೋಗ್ಯ ಸಚಿವ ಜೆಪಿ ನಡ್ಡಾ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರಾದ ಟೆಡ್ರೋಸ್ ಗೆಬ್ರೆಯೆಸುಸ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಚಿವ ನಡ್ಡಾ ಅವರು ಟ್ವೀಟ್ ಮಾಡಿದ್ದು, ಕೈಗೆಟಕುವ ಆರೋಗ್ಯ ಸೇವೆ ಒದಗಿಸುವುದು ಪ್ರಧಾನಿ ಮೋದಿ ಅವರ ವಿಶನ್ ಆಗಿದೆ. ನಿಮ್ಮ ಪ್ರೀತಿಯ ನುಡಿಗಳಿಗೆ ಧನ್ಯವಾದಗಳು ಮತ್ತು ನಿಮ್ಮ ಜತೆಗಿನ ಭೇಟಿ ತುಂಬಾ ಫಲಪ್ರದವಾಗಿತ್ತು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...