alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ಅವತಾರವೆಂದು ಬಿಳಿ ಆಮೆಯನ್ನು ಪೂಜಿಸುತ್ತಿದ್ದ ಗ್ರಾಮಸ್ಥರು

m929ವಾಸ್ತು ಪ್ರಕಾರ ಆಮೆ, ಆಮೆಯ ಚಿತ್ರ ಅಥವಾ ಲೋಹದಿಂದ ತಯಾರಿಸಲಾದ ಆಮೆ ಇವು ಮನೆಯಲ್ಲಿಡುವುದು ಶುಭ ಸೂಚಕ ಎಂದು ತಿಳಿಯಲಾಗುತ್ತದೆ. ಕೆಲವರು ಬೆಳ್ಳಿಯ ಆಮೆಯ ಉಂಗುರವನ್ನು ಧರಿಸಿ ತಮಗೆ ಒಳಿತಾಗಿದೆ ಎಂದು ನಂಬಿದವರೂ ಉಂಟು. ಹಾಗೆಯೇ ಒಡಿಶಾದ ಗ್ರಾಮವೊಂದರಲ್ಲಿ ಸಿಕ್ಕಿದ್ದ ಬಿಳಿ ಆಮೆಯನ್ನು ದೇವರ ಪ್ರತಿರೂಪವೆಂದು ಭಾವಿಸಿ ಪೂಜಿಸುತಿದ್ದ ಘಟನೆ ನಡೆದಿದೆ.

ಒಡಿಶಾದ ಕೋರ ಗ್ರಾಮದ ಸಣ್ಣ ಕೆರೆಯೊಂದರಲ್ಲಿ ಬಿಳಿ ಆಮೆ ಸಿಕ್ಕಿದೆ. ಅದು ಇತರ ಆಮೆಗಳಿಗಿಂತ ಸುಂದರವಾಗಿ ಕಾಣುತ್ತಿದ್ದ ಕಾರಣ ಈ ಆಮೆ ಶಾಂತಿ, ಸಮೃದ್ಧಿಯ ಸಂಕೇತ ಹೊತ್ತು ತಂದಿದೆ. ಅದು ದೇವರ ಪ್ರತಿರೂಪ ಎಂದು ಭಾವಿಸಿದ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದರು.

ವಿಷಯ ತಿಳಿದ ಕೇಂದ್ರಪಾಡದ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಅರಣ್ಯ ಅಧಿಕಾರಿಗಳು ಇದನ್ನು ವಶಪಡಿಸಿಕೊಂಡಿದ್ದಾರೆ. ಮೊದಲು ಈ ಆಮೆಯನ್ನು ಕೊಡಲು ಒಪ್ಪದ ಗ್ರಾಮಸ್ಥರಿಗೆ, ಇದು ಅಳಿವಿನ ಆಂಚಿನಲ್ಲಿರುವ ಅಪರೂಪದ ಪ್ರಾಣಿ. ಹೀಗೆ ಇಟ್ಟುಕೊಳ್ಳುವುದು ಅಪರಾಧ ಎಂದು ತಿಳಿಸಿದ ನಂತರ ಆಮೆಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...