alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಜಾಹೀರಾತು ಪ್ರಸಾರಕ್ಕೆ ಪ್ರತ್ಯೇಕ ಸಮಯ ನಿಗದಿ…?

ವಯಸ್ಕರು ಮಾತ್ರ ನೋಡಬಹುದಾದಂಥ ಕಾಂಡೋಮ್ ಜಾಹೀರಾತುಗಳನ್ನು ಟಿವಿಯಲ್ಲಿ ಪ್ರಸಾರ ಮಾಡಲು ಸೂಕ್ತ ಸಮಯ ನಿಗದಿಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೆಲವು ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಅಶ್ಲೀಲ ಜಾಹಿರಾತುಗಳನ್ನು ಪ್ರಸಾರ ಮಾಡುತ್ತಿವೆ ಅಂತಾ ಸಾರ್ವಜನಿಕರು ದೂರು ನೀಡಿದ್ದರು.

ಕಾಂಡೋಮ್ ಜಾಹೀರಾತಿನಲ್ಲಿ ಅಡಲ್ಟ್ ಕಂಟೆಂಟ್ ಗಳಿರುವುದರಿಂದ ಅದನ್ನು ಪ್ರೈಮ್ ಟೈಮ್ನಲ್ಲಿ ಪ್ರಸಾರ ಮಾಡುವುದು ಸರಿಯಲ್ಲ. ಯಾಕಂದ್ರೆ ಆ ಸಮಯದಲ್ಲಿ ಕುಟುಂಬದವರೆಲ್ಲ ಒಟ್ಟಾಗಿ ಕುಳಿತು ಟಿವಿ ವೀಕ್ಷಿಸುತ್ತಾರೆ. ಹಾಗಾಗಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ಕಾಂಡೋಮ್ ಜಾಹೀರಾತು ಪ್ರಸಾರ ಮಾಡುವುದು ಸೂಕ್ತ ಅಂತಾ ಭಾರತದ ಜಾಹೀರಾತು ಮಾನದಂಡ ಪರಿಷತ್ ಹೇಳಿದೆ.

ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸಿದೆ. ಇಂತಹ ಜಾಹೀರಾತುಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಅವುಗಳ ಪ್ರಸಾರಕ್ಕೆ ಸಮಯ ನಿಗದಿಪಡಿಸುವುದು ಸೂಕ್ತ ಅಂತಾ ಹೇಳಿದೆ. ಈ ಬಗ್ಗೆ ಟಿವಿ ವಾಹಿನಿಗಳಿಂದ್ಲೂ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರಕ್ಕೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...