alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯಾಯಾಧೀಶರಿಗೆ ಬಾಲಕ ಕೊಟ್ಟ ಪತ್ರದಲ್ಲೇನಿದೆ ಗೊತ್ತಾ?

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಹಾಗೂ ಮೋಹನ್ ಶಾಂತನಗೌಡರ್ ಅವರಿಗೆ 10 ವರ್ಷದ ಬಾಲಕನೊಬ್ಬ ಪತ್ರವೊಂದನ್ನು ಕೊಟ್ಟಿದ್ದಾನೆ. ತಂದೆ-ತಾಯಿ ನಡುವಣ ವಿಚ್ಛೇದನ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಕ್ಕಾಗಿ ಬಾಲಕನ ಥ್ಯಾಂಕ್ಯೂ ನೋಟ್ ಇದು.

ಆ ದಂಪತಿ 2011ರಿಂದ್ಲೇ ವಿಚ್ಛೇದನಕ್ಕಾಗಿ ಕಸರತ್ತು ಶುರು ಮಾಡಿದ್ರು. ಪರಸ್ಪರರ ವಿರುದ್ಧ ಈವರೆಗೆ 23 ಪ್ರಕರಣಗಳನ್ನು ದಾಖಲಿಸಿದ್ದರು. ಅಪ್ಪ-ಅಮ್ಮನ ಜಗಳದಲ್ಲಿ ಆ ಬಾಲಕ ಮತ್ತವನ ಸಹೋದರಿ ಬಡವಾಗಿ ಹೋಗಿದ್ದರು. ಅತ್ತ ವಿಚ್ಛೇದನವೂ ಸಿಕ್ಕಿರಲಿಲ್ಲ, ದಂಪತಿ ಕಲಹವೂ ಅಂತ್ಯವಾಗಿರಲಿಲ್ಲ.

ಆದ್ರೀಗ ಪರಸ್ಪರರ ಮೇಲೆ ದಾಖಲಿಸಿದ್ದ ಪ್ರಕರಣಗಳನ್ನೆಲ್ಲ ಇಬ್ಬರೂ ವಾಪಸ್ ಪಡೆದಿದ್ದಾರೆ. ಸಮ್ಮತಿ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಸುಮಾರು 7 ವರ್ಷಗಳಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಬಾಲಕ ನೀಡಿದ ಪತ್ರವನ್ನು ಸಹ ಉಲ್ಲೇಖಿಸಿ ತೀರ್ಪು ನೀಡಿದ ನ್ಯಾಯಾಧೀಶರು, ವಿಚ್ಚೇದನಕ್ಕೆ ಅನುಮತಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...