alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿಯಾದ ಚಾಲಕನಿಗೆ ಸಾರಥಿಯಾದ ಜಿಲ್ಲಾಧಿಕಾರಿ

ತಮಿಳುನಾಡಿನ ಕರೂರಿನಲ್ಲೊಂದು ಮನ ಮಿಡಿಯುವ ಘಟನೆ ನಡೆದಿದೆ. ಕಳೆದ 34 ವರ್ಷಗಳಿಂದಲೂ ಕರೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ. ಪರಮಶಿವಂ ಸೋಮವಾರದಂದು ನಿವೃತ್ತಿಯಾಗಿದ್ದು, ಅಭಿನಂದನಾ ಸಮಾರಂಭದ ಬಳಿಕ ಜಿಲ್ಲಾಧಿಕಾರಿಗಳೇ ಪರಮಶಿವಂ ಹಾಗೂ ಅವರ ಪತ್ನಿಯನ್ನು ಜಿಲ್ಲಾಧಿಕಾರಿಗಳ ಅಧಿಕೃತ ಕಾರಿನಲ್ಲಿ ಕೂರಿಸಿಕೊಂಡು ಸ್ವತಃ ಚಾಲನೆ ಮಾಡಿಕೊಂಡು ಮನೆ ತನಕ ಡ್ರಾಪ್ ಮಾಡಿದ್ದಾರೆ.

ಜಿಲ್ಲಾಧಿಕಾರಿ ಅನ್ಬಳಗನ್ ರಿಗೆ ತಮ್ಮ ಚಾಲಕ ಪರಮಶಿವಂ ಸೋಮವಾರ ನಿವೃತ್ತಿಯಾಗುತ್ತಿರುವ ಕುರಿತು ಮಾಹಿತಿ ಇತ್ತು. ಹೀಗಾಗೇ ಅಂದು ಪತ್ನಿಯನ್ನೂ ಕರೆದುಕೊಂಡು ಬರುವಂತೆ ಪರಮಶಿವಂ ಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ವಿವಿಧ ಇಲಾಖೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳ ಹಾಜರಾತಿಯಲ್ಲಿ ಪರಮಶಿವಂ ದಂಪತಿಗಳಿಗೆ ಆತ್ಮೀಯವಾಗಿ ಅಭಿನಂದಿಸಲಾಗಿದೆ.

ಬಳಿಕ ಜಿಲ್ಲಾಧಿಕಾರಿ ಅನ್ಬಳಗನ್, ದಂಪತಿಗಳನ್ನು ತಮ್ಮ ಅಧಿಕೃತ ಕಾರಿನಲ್ಲಿ ಕೂರಿಸಿಕೊಂಡಿದ್ದು ತಾವೇ ಚಾಲಕರಾಗಿದ್ದಾರೆ. ಗಾಂಧಿಗ್ರಾಮಂನಲ್ಲಿರುವ ಪರಮಶಿವಂ ಮನೆಗೆ ಡ್ರಾಪ್ ಮಾಡಿದ ಜಿಲ್ಲಾಧಿಕಾರಿಗಳು ಅಲ್ಲಿಯೂ ಅವರ ಕುಟುಂಬಸ್ಥರ ಜೊತೆ ಕೆಲ ಸಮಯ ಕಳೆದಿದ್ದಾರಲ್ಲದೇ ಫೋಟೋ ಸಹ ತೆಗೆಸಿಕೊಂಡಿದ್ದಾರೆ. ಸ್ವತಃ ಜಿಲ್ಲಾಧಿಕಾರಿಗಳೇ ತಮಗೆ ಡ್ರಾಪ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಪರಮಶಿವಂ, ಇಂತದೊಂದು ಅವಿಸ್ಮರಣೀಯ ಬೀಳ್ಕೊಡುಗೆಯನ್ನು ತಾನು ನಿರೀಕ್ಷಿಸಿರಲಿಲ್ಲ. ತಮಗೆ ಇದೊಂದು ಅಭೂತಪೂರ್ವ ಕ್ಷಣವೆಂದು ಹೇಳಿದ್ದಾರೆ. ಪರಮಶಿವಂ ತಮ್ಮ ವೃತ್ತಿ ಬದುಕಿನಲ್ಲಿ ಒಂದೂ ಅಪಘಾತವೆಸಗಿಲ್ಲವೆನ್ನಲಾಗಿದ್ದು, ಈ ಕಾರಣಕ್ಕೆ ಮೂರು ಬಾರಿ ಪುರಸ್ಕೃತಗೊಂಡಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...