alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿನ ಬರ್ಫಿ ಇಷ್ಟಪಡ್ತಿದ್ದರಂತೆ ಅಟಲ್ ಬಿಹಾರಿ ವಾಜಪೇಯಿ

ಭಾರತದ ಮಾಜಿ ಪ್ರಧಾನಿ, ಅಜಾತಶತ್ರು ವಾಜಪೇಯಿಯವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿದೆ. ದೇಶದೆಲ್ಲೆಡೆ ವಾಜಪೇಯಿಯವರ ಒಡನಾಟವಿದ್ದ ಜನರಿಗೆ ಈಗ ದೇಶದ ಮುತ್ಸದ್ದಿ ರಾಜಕಾರಣಿಯ ನೆನಪು ಬಿಡದಂತೆ ಕಾಡುತ್ತಿದೆ. ಆ ಪೈಕಿ ವಾಜಪೇಯಿಯವರಿಗೆ ಊಟದ ನಂತರ ತುಂಬಾನೇ ಇಷ್ಟವಾಗುತ್ತಿದ್ದ ಸಿಹಿಯನ್ನು ನೀಡುತ್ತಿದ್ದವರು ಮಾಜಿ ಪ್ರಧಾನಿಯವರ ಒಡನಾಟವನ್ನ ನೆನಪಿಸಿಕೊಂಡಿದ್ದಾರೆ.

ಹಳೆಯ ಲಕ್ನೋದ ಬೀದಿಗಳಲ್ಲಿರುವ ಸ್ವೀಟ್ ಸ್ಟಾಲ್ ಒಂದರಲ್ಲಿನ ಹಾಲಿನ ಬರ್ಫಿ ಅಂದ್ರೆ ವಾಜಪೇಯಿಯವರಿಗೆ ತುಂಬಾ ಇಷ್ಟವಾಗುತ್ತಿತ್ತಂತೆ. ಊಟದ ನಂತರ ಅಟಲ್ ತುಂಬಾ ಇಷ್ಟಪಟ್ಟು ಬರ್ಫಿಯನ್ನು ತಿನ್ನುತ್ತಿದ್ದರಂತೆ. ಖುದ್ದಾಗಿ ಅವರೇ ಬಂದು ಬರ್ಫಿಯನ್ನು ತೆಗೆದುಕೊಂಡು ಹೋಗ್ತಿದ್ದರು ಅಂತ ಅಂಗಡಿಯ ಮಾಲೀಕ ಕೀರ್ತಿ ತ್ರಿವೇದಿ ಹೇಳಿದ್ದಾರೆ.

ಕೀರ್ತಿ ತ್ರಿವೇದಿ ತಂದೆ ಬಾಬುರಾಮ್ ತ್ರಿವೇದಿ ಮತ್ತು ಅಟಲ್ ನಡುವೆ ಬರ್ಫಿಯಿಂದಾಗಿ ಸ್ನೇಹ ಶುರುವಾಗಿತ್ತು. ಆದ್ರೆ ಅವರು ರಾಜಕಾರಣದಿಂದ ಹಿಂದೆ ಸರಿದು, ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದ ಮೇಲೂ ಅವರ ಸಹಾಯಕರ ಮೂಲಕ ಹಾಲಿನ ಬರ್ಫಿಯನ್ನು ಇಲ್ಲಿಂದ ತರಿಸಿಕೊಳ್ಳುತ್ತಿದ್ದರು ಅಂತ ಕೀರ್ತಿ ತ್ರಿವೇದಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...