alex Certify
ಕನ್ನಡ ದುನಿಯಾ       Mobile App
       

Kannada Duniya

ಈಜುಕೊಳದಲ್ಲಿ ಹಸು ಕಂಡವರಿಗೆ ಅಚ್ಚರಿ

hasu-gujar

ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ನ ವದಾಜ್ ಏರಿಯಾದಲ್ಲಿ ಬಿಸಿಲಿನ ಬೇಗೆಯಿಂದ ಬಳಲಿದ ಜನ ಈಜಾಡಿ ದಣಿವಾರಿಸಿಕೊಳ್ಳಲು ಸ್ವಿಮ್ಮಿಂಗ್ ಪೂಲ್ ಗೆ ಬಂದಾಗ ಅಚ್ಚರಿಯಾಗಿದೆ.

ಈಜುಕೊಳದಲ್ಲಿ ಹಸುವೊಂದು ಈಜಾಡುತ್ತಿರುವುದು ಕಂಡಿದೆ. ಆದರೆ, ಅದು ಮೇಲೆ ಬರಲಾಗದೇ ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಹಸುವನ್ನು ರಕ್ಷಿಸಿದ್ದಾರೆ.

ಈಜುಕೊಳದ ಗೇಟ್ ಹಾಕದ ಕಾರಣ ಒಳ ನುಗ್ಗಿದ ಹಸು ಸೀದಾ ಈಜುಕೊಳಕ್ಕೆ ಹಾರಿದೆ. ಕೆಲ ಸಮಯದ ಬಳಿಕ ಮೇಲೆ ಬರಲು ಪ್ರಯತ್ನ ನಡೆಸಿದರೂ, ಅದಕ್ಕೆ ಸಾಧ್ಯವಾಗಿಲ್ಲ. ಮೆಟ್ಟಿಲು ಅಥವಾ ಇಳಿಜಾರು ಇಲ್ಲದೇ ಸುತ್ತಲೂ ಸಿಮೆಂಟ್ ಕಟ್ಟೆ ಇದ್ದ ಕಾರಣ ಹಸು ಮೇಲೆ ಬರಲು ಒದ್ದಾಡಿದೆ.

ಸ್ಥಳೀಯರು ಹಗ್ಗದ ಸಹಾಯದಿಂದ ಅದನ್ನು ಮೇಲಕ್ಕೆ ತಂದಿದ್ದಾರೆ. ಈಜುಕೊಳದಿಂದ ಮೇಲೆ ಬಂದ ಹಸು ಅಲ್ಲಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...