alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯತ್ವವೇ ಇಲ್ಲದ ಆ ದಂಪತಿಯದ್ದು ಅದೆಂತಾ ದೇಶಭಕ್ತಿ

man-thrashed

ಪಣಜಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಂತಿಲ್ಲ ಎಂಬ ಕಾರಣಕ್ಕೆ ವಿಕಲ ಚೇತನರೊಬ್ಬರನ್ನು ಥಳಿಸಿದ ಅಮಾನವೀಯ ಘಟನೆ ನಡೆದಿದೆ. ಸಲೀಲ್ ಚತುರ್ವೇದಿ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಕಾಲುಗಳನ್ನು ಮೇಲಕ್ಕೆತ್ತಲೂ ಅವರಿಂದ ಸಾಧ್ಯವಿಲ್ಲ. ಹಾಗಾಗಿ ವೀಲ್ ಚೇರ್ ನಲ್ಲೇ ಅವರ ಓಡಾಟ.

ರಾಷ್ಟ್ರಗೀತೆ ಪ್ರಸಾರವಾಗ್ತಿದ್ದಾಗ ಎದ್ದು ನಿಂತಿದ್ದ ದಂಪತಿಗಳಿಗೆ ಸಲೀಲ್ ಕುಳಿತಿದ್ದು ಮಹಾಪರಾಧ ಎಂದುಕೊಂಡ್ರು. ಅಷ್ಟಕ್ಕೆ ಸುಮ್ಮನಾಗದ ಪತಿ, ಸಲೀಲ್ ರನ್ನು ಥಳಿಸಿದ್ದಾನೆ. ಪತ್ನಿ ಎದ್ದು ನಿಲ್ಲಲು ಸಾಧ್ಯವಿಲ್ಲವೇ ಅಂತಾ ಕೂಗಿಕೊಂಡಿದ್ದಾಳೆ. ಹಲ್ಲೆಯಿಂದ ಜರ್ಜರಿತರಾದ, ಮಾನಸಿಕವಾಗಿ ನೊಂದ ಸಲೀಲ್  ಪರಿಸ್ಥಿತಿ ಅರ್ಥಮಾಡಿಕೊಳ್ಳಿ ಅಂತಾ ಮನವಿ ಮಾಡಿದ್ದಾರೆ. ಮನುಷ್ಯತ್ವ ಮರೆತು ದೇಶಭಕ್ತಿಯ ಆಡಂಬರದ ಪ್ರದರ್ಶನ ಮಾಡುತ್ತಿದ್ದ ದಂಪತಿಗೆ ಇಷ್ಟೆಲ್ಲಾ ಆದ್ಮೇಲೆ ವಾಸ್ತವದ ಅರಿವಾಗಿದೆ. ಸಲೀಲ್ ವಿಕಲಚೇತನರು ಅನ್ನೋದು ಗೊತ್ತಾಗ್ತಿದ್ದಂತೆ ಎಲ್ಲಿ ಪೊಲೀಸ್ ಕೇಸ್ ಆಗುತ್ತೋ ಅನ್ನೋ ಭಯದಲ್ಲಿ ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ಘಟನೆಯ ನಂತರ ಚತುರ್ವೇದಿ ಸಿನಿಮಾಕ್ಕೆ ಹೋಗಿಲ್ಲ. ಅಲ್ಲಿ ಮತ್ತಿನ್ಯಾರಾದ್ರೂ ಹಲ್ಲೆ ಮಾಡಬಹುದು ಅನ್ನೋ ಭಯ ಅವರಿಗೆ. ಚತುರ್ವೇದಿ ಒಬ್ಬ ಲೇಖಕರು, ಆಸ್ಟ್ರೇಲಿಯನ್ ಓಪನ್ ನಲ್ಲಿ ವೀಲ್ ಚೇರ್ ಟೆನಿಸ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರ ತಂದೆ ಏರ್ ಫೋರ್ಸ್ ನಲ್ಲಿದ್ದರು. ಅನಿವಾರ್ಯತೆಯಿಂದ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲಲಿಲ್ಲ ಎಂದ ಮಾತ್ರಕ್ಕೆ ನಾನು ಭಾರತವನ್ನು ಪ್ರೀತಿಸುತ್ತಿಲ್ಲ ಎಂಬ ನಿರ್ಧಾರಕ್ಕೆ ಬರುವುದು ಎಷ್ಟು ಸರಿ ಎಂಬುದು ಅವರ ಪ್ರಶ್ನೆ. ಒಟ್ನಲ್ಲಿ ಅಸಹಾಯಕ ವ್ಯಕ್ತಿಯೊಬ್ಬರನ್ನು ದೇಶಭಕ್ತಿಯ ಹೆಸರಲ್ಲಿ ಥಳಿಸಿರುವುದು ನಿಜಕ್ಕೂ ಆಕ್ಷೇಪಾರ್ಹ ಸಂಗತಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...