alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ವಿಡಿಯೋ ಮೂಲಕ ನ್ಯಾಯಾಲಯದಲ್ಲಿ ನಡೆದಿದೆ ವಿಚಾರಣೆ

ಪುಣೆ: ಇದೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ವಾಟ್ಸಾಪ್ ವಿಡಿಯೋ ಕಾಲ್‌ ಮೂಲಕ ಅರ್ಜಿದಾರನ ವಿಚಾರಣೆ ನಡೆಸಲಾಗಿದೆ.

ಇತ್ತೀಚೆಗೆ ವಾಟ್ಸಾಪ್, ಸಾಮಾಜಿಕ ತಾಣಗಳು ಸುಳ್ಳು ಸುದ್ದಿಗಳ ವಿಚಾರಕ್ಕೆ ಸುದ್ದಿಯಲ್ಲಿದ್ದರೆ, ಪುಣೆ ನ್ಯಾಯಾಲಯದಲ್ಲಿ ಹೊಸ ವಿಚಾರಕ್ಕೆ ಬಳಕೆ ಮಾಡಲಾಗಿದೆ.

2016 ರಲ್ಲಿ ನಡೆದ ಅಫಘಾತದಲ್ಲಿ ನಡೆದಾಡುವ ಶಕ್ತಿ ಕಳೆದುಕೊಂಡ ಸುಭಾಷ್‌ ಯಾದವ್‌ ಅವರ ಅಪಘಾತ ಸಂಬಂಧ ಪ್ರಕರಣದ ವಿಚಾರಣೆಯನ್ನು ವಾಟ್ಸಾಪ್ ವಿಡಿಯೋ ಕಾಲ್‌ ಮೂಲಕ ನಡೆಸಲಾಗಿದೆ.

ಕಾಲುಗಳಿಗೆ ಶಕ್ತಿ ಇಲ್ಲದ ಹಿನ್ನೆಲೆಯಲ್ಲಿ ಯಾದವ್‌ ಈವರೆಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ನ್ಯಾಯಾಲಯದಲ್ಲಿದ್ದ ವಿಡಿಯೋ ಕಾನ್ಫರೆನ್ಸ್‌ ಉಪಕರಣಗಳು ಸರಿ ಇಲ್ಲದ ಕಾರಣ ವಾಟ್ಸಾಪ್ ಮೂಲಕ ವಿಡಿಯೋ ಕರೆ ಮಾಡಿ, ಹೇಳಿಕೆ, ಕ್ರಾಸ್‌ ಎಕ್ಸಾಮಿನೇಷನ್‌ ನಡೆಸಲಾಗಿದೆ.

ಮುಂಬಯಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಲ್ಹಾಪುರದ ಚಂದಾಗಡದ ಹೋಟೆಲ್‌ ನಲ್ಲಿ ವೇಯ್ಟರ್‌ ಆಗಿದ್ದ ಯಾದವ್‌, 2016 ಅ.31 ರಂದು ಬೇರೆ ಕೆಲಸಕ್ಕೆ ಸೇರಲು ನಿಶ್ಚಯಿಸಿದ್ದು, ಹೋಟೆಲ್‌ನಿಂದ ಕೊನೆ ವೇತನ ತೆಗೆದುಕೊಳ್ಳಲು ಹೋಗಲು ಬಸ್‌ ಏರಲು ರಸ್ತೆ ದಾಟಿದ್ದಾನೆ. ಈ ವೇಳೆ ವೇಗವಾಗಿ ಬಂದ ಕಾರು ಯಾದವ್‌ ಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿದ್ದು, ಪೊಲೀಸರು ಯಾದವ್‌ ನನ್ನು ಆಸ್ಪತ್ರೆಗೆ ಸೇರಿಸಿದ್ದರು. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು, ಸಿಸಿ ಟಿವಿ ದೃಶ್ಯಾವಳಿ ಸಹಾಯದಿಂದ ಕಾರನ್ನು ಪತ್ತೆ ಹಚ್ಚಿ, ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...