alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮೇಲೆ ನಿಮ್ಮ ವಾಟ್ಸಾಪ್ ಮೆಸೇಜ್ ಓದುತ್ತೆ ‘ಸಿರಿ’

wats

iOSನಲ್ಲಿ ಈಗ ಹೊಸ ವಾಟ್ಸಾಪ್ ಅಪ್ ಡೇಟ್ ಲಭ್ಯವಿದೆ. ಆ್ಯಪಲ್ ಬಳಕೆದಾರರು ತಮ್ಮ ವಾಟ್ಸಾಪ್ ಮೆಸೇಜ್ ಅನ್ನು ಓದಬೇಕೆಂದಿಲ್ಲ. ‘ಸಿರಿ’ಯ ಬಳಿ ಸಂದೇಶ ಓದುವಂತೆ ಸೂಚಿಸಬಹುದು. ವಾಟ್ಸಾಪ್ ನಲ್ಲಿ ಈಗ ‘ಸಿರಿ’ ಎಂಬ ಹೊಸ ಅಪ್ ಡೇಟ್ ಮಾಡಲಾಗಿದೆ. ಇದು 88.8 ಎಂಬಿ ಗಾತ್ರವಿದ್ದು, ಆ್ಯಪ್ ಸ್ಟೋರ್ ನಲ್ಲಿ ಲಭ್ಯವಿದೆ.

ಆ್ಯಪಲ್ ಬಳಕೆದಾರರು ‘ಸಿರಿ’ಯ ಮೂಲಕ ಮೆಸೇಜ್ ಓದಿಸಬಹುದು ಮತ್ತು ಕಳಿಸಬಹುದು. ಅವರೇ ಖುದ್ದಾಗಿ ಮೆಸೇಜ್ ಟೈಪ್ ಮಾಡಬೇಕೆಂದಿಲ್ಲ. ಬಂದಿರೋ ಮೆಸೇಜ್ ಅನ್ನು ಓದಬೇಕೆಂದಿಲ್ಲ. ಆ ಕೆಲಸವನ್ನು ‘ಸಿರಿ’ ಮಾಡುತ್ತದೆ.

ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ‘ಸಿರಿ’ ಆ್ಯಪ್ ಸಪೋರ್ಟ್ ಸೆಲೆಕ್ಟ್ ಮಾಡಿದ್ರೆ ‘ಸಿರಿ’ ಸೇವೆ ನಿಮಗೆ ಲಭ್ಯವಾಗುತ್ತದೆ. ಕಾಲ್ ಟ್ಯಾಬ್ಸ್, ಕಾಂಟಾಕ್ಟ್ ಇನ್ಫೋ ಮತ್ತು ಗ್ರೂಪ್ ಇನ್ಫೋ ಸ್ಕ್ರೀನ್ ಗಳಲ್ಲಿ ಕೂಡ ವಾಟ್ಸಾಪ್ ಬದಲಾವಣೆ ಮಾಡುತ್ತಿದೆ. ಮೈ ಅಪ್ ಡೇಟ್ ಸ್ಕ್ರೀನ್ ನಲ್ಲಿ ಬಳಕೆದಾರರು ಹಲವು ಸ್ಟೇಟಸ್ ಗಳನ್ನು ಒಮ್ಮೆಲೇ ಸೆಲೆಕ್ಟ್ ಮಾಡಬಹುದು, ಅವನ್ನು ಫಾರ್ವರ್ಡ್ ಕೂಡ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...