alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಜಿಯೋ ಜೊತೆ ಕೈ ಜೋಡಿಸಲಿದೆ ವಾಟ್ಸಾಪ್

ದೇಶದೆಲ್ಲೆಡೆ‌ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿ ತಪ್ಪಿಸಲು ಕೇಂದ್ರ‌ ಕಠಿಣ ಸೂಚನೆ ನೀಡಿದ ಬೆನ್ನಲ್ಲೇ, ವಾಟ್ಸಾಪ್ ಸುಳ್ಳು ‌ಸುದ್ದಿ ನಿಯಂತ್ರಣಕ್ಕೆ ಜಿಯೋ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದಿದೆ.

ಮುಕೇಶ್ ಅಂಬಾನಿ‌ ಮಾಲೀಕತ್ವದ ಜಿಯೋ ನೆಟ್ ವರ್ಕ್ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಅನೇಕರು ಇಂಟರ್ ನೆಟ್ ನತ್ತ ಮುಖ ಮಾಡಿದ್ದಾರೆ. ಪ್ರಮುಖವಾಗಿ ಜಿಯೋ ‌ಮೊಬೈಲ್ ನಿಂದ ವಾಟ್ಸಾಪ್ ಗೆ ಲಕ್ಷಾಂತರ ಮಂದಿ ಸೇರಿದ್ದು, ನೂತನವಾಗಿ ಸೇರಿದವರಿಗೆ ಜಿಯೋ ಸಂಸ್ಥೆ ಸಾಮಾಜಿಕ ಜಾಲತಾಣಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡುತ್ತಿದೆ. ಇದೊಂದು ಉತ್ತಮ‌ ಬೆಳವಣಿಗೆ ಎಂದು ವಾಟ್ಸಾಪ್ ಹೇಳಿದೆ.

ಕಳೆದ ಒಂದು ತಿಂಗಳಲ್ಲಿ ಸುಮಾರು 25 ಮಿಲಿಯನ್ ಜನರಿಗೆ ಜಿಯೋ ಮೊಬೈಲ್ ದೊರಕಿದೆ. ಇದರಲ್ಲಿ‌ ಬಹುತೇಕರು ಮೊದಲ ಬಾರಿಗೆ ವಾಟ್ಸಾಪ್ ಸೇರಿ‌ ಇಂಟರ್ ನೆಟ್ ಬಳಕೆದಾರರಾಗಿದ್ದಾರೆ. ಆದ್ದರಿಂದ ಇವರಿಗೆ ಸುಳ್ಳು ಸುದ್ದಿ ಸೇರಿದಂತೆ ಇತರೆ ವಿಚಾರದ ಬಗ್ಗೆ ಎಚ್ಚರಿಕೆ ವಹಿಸುವುದು ಅತಿ ಮುಖ್ಯವಾಗಿದೆ. ಜಿಯೋ ಈ‌ ಕೆಲಸ ಮಾಡುತ್ತಿದೆ. ಮುಂದಿನ ದಿನದಲ್ಲಿ ವಾಟ್ಸಾಪ್ ಕೂಡ ಜಿಯೋದೊಂದಿಗೆ ಕೈಜೋಡಿಸಲಿದೆ ಎಂದು ವಾಟ್ಸಾಪ್ ವಕ್ತಾರ ಕಾರ್ಲ್ ಮೂಗ್ ತಿಳಿಸಿದ್ದಾರೆ.

ಈಗಾಗಲೇ ಭಾರತದಲ್ಲಿ ಕುಂದುಕೊರತೆ ಕೇಂದ್ರವನ್ನು ಆರಂಭಿಸಿರುವ ವಾಟ್ಸಾಪ್, ರೆಡಿಯೋ, ಟಿವಿ ಹಾಗೂ ಸಾಮಾಜಿಕ ಜಾಲತಾಣದ‌ ಮೂಲಕ ಸುಳ್ಳು‌ ಸುದ್ದಿ ಬಗ್ಗೆ ಎಚ್ಚರ ವಹಿಸುವಂತೆ ಗ್ರಾಹಕರಿಗೆ ಸಂದೇಶ ನೀಡುತ್ತಿದ್ದು, ಇದನ್ನು ಮುಂದಿನ ದಿನದಲ್ಲಿಯೂ ಮುಂದುವರಿಸಲಾಗುವುದು ಎಂದಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...