alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ವಾಟ್ಸಾಪ್ ಸುಳ್ಳು ಸುದ್ದಿಗೆ ಇಬ್ಬರ ಬಲಿ

ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಹಬ್ಬುವ ಸುಳ್ಳು ಸುದ್ದಿಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಇಂತಹ ಸುಳ್ಳು ಸುದ್ದಿಯನ್ನು ನಂಬಿದ ಸಾರ್ವಜನಿಕರು ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿದ್ದಾರೆ.

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಾಟ್ಸಾಪ್ ಸಂದೇಶವೊಂದರಲ್ಲಿ ‘ಅಪರಿಚಿತರು ಊರಿನಲ್ಲಿ ಸುತ್ತಾಡಿ ಬಳಿಕ ಮನುಷ್ಯರನ್ನು ಕೊಂದು ಅವರ ಅಂಗಾಂಗಗಳನ್ನು ಕದ್ದುಕೊಂಡು ಹೋಗುತ್ತಾರೆ’ ಎಂದು ತಿಳಿಸಲಾಗಿತ್ತು.

ಈ ಸುಳ್ಳು ಸುದ್ದಿಯನ್ನು ಪರಾಮರ್ಶಿಸುವ ಗೋಜಿಗೂ ಹೋಗದ ಬಹುತೇಕರು ಶೇರ್ ಮಾಡಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಗ್ರಾಮವೊಂದರಲ್ಲಿ ಒಟ್ಟಾದ ಗ್ರಾಮಸ್ಥರು, ಗ್ರಾಮದಲ್ಲಿ ಅಡ್ಡಾಡುತ್ತಿದ್ದ ಇಬ್ಬರನ್ನು ಕಂಡು ಇವರೇ ಆ ವ್ಯಕ್ತಿಗಳೆಂದು ಭಾವಿಸಿ ಅವರನ್ನು ಹತ್ಯೆಮಾಡಿದ್ದಾರೆ.

ಆದರೆ ಅವರು ಭಿಕ್ಷುಕರುಗಳಾಗಿದ್ದು, ವಾಟ್ಸಾಪ್ ಸುಳ್ಳು ಸುದ್ದಿಯಿಂದಾಗಿ ಜೀವವನ್ನೇ ಕಳೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಸುಳ್ಳು ಸುದ್ದಿ ಹಬ್ಬಿಸಿದ ಮೂವರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...