alex Certify
ಕನ್ನಡ ದುನಿಯಾ       Mobile App
       

Kannada Duniya

ಮೈತ್ರಿ ಸರ್ಕಾರದ ಬಿಕ್ಕಟ್ಟು, ರಹಸ್ಯ ಬಿಚ್ಚಿಟ್ಟು ಅತೃಪ್ತ ಶಾಸಕರ ಆಕ್ರೋಶ

ಮತದಾರರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ ಬಂಡಾಯ ಶಾಸಕರು ಮೈತ್ರಿ ಸರ್ಕಾರದ ಬಿಕ್ಕಟ್ಟು ಆರಂಭವಾಗಿದ್ದು ಬೆಳಗಾವಿಯಿಂದ. ಬಿಕ್ಕಟ್ಟು ಆರಂಭಕ್ಕೆ ಮಹಿಳಾ ಶಾಸಕಿ ಮೊದಲ ಕಾರಣಕರ್ತರು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಬೆಳಗಾವಿ ಸಮಸ್ಯೆ ಬಗೆಹರಿಸಲು ಯಾರೂ ಪ್ರಯತ್ನ ನಡೆಸಲಿಲ್ಲ. ಸಮನ್ವಯ ಸಮಿತಿ, ಕೆಪಿಸಿಸಿ ಅಧ್ಯಕ್ಷರಾಗಲಿ ಪ್ರಯತ್ನ ನಡೆಸಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರಿಂದಲೂ ಏನೂ ಆಗಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿ ಶಾಸಕರ ಹಸ್ತಕ್ಷೇಪದಿಂದ ಬೇಸರವಾಗಿದೆ ಎಂದು ದೂರಿದ್ದಾರೆ.

ಒಂದು ವರ್ಷದಿಂದ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಸರಿ ಇಲ್ಲ. ಇದನ್ನು ಹೇಳಿಕೊಂಡು ಬಂದರೂ ನಮ್ಮ ಮಾತನ್ನು ಯಾರೂ ಕೇಳಲಿಲ್ಲ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕಚೇರಿಯಲ್ಲಿ ಶಾಸಕರ ಪತ್ರಗಳಿಗೆ ಮಾನ್ಯತೆಯೇ ಇಲ್ಲವಾಗಿದೆ ಎಂದು ಮತದಾರರಿಗೆ ವಾಟ್ಸಾಪ್ ಮೂಲಕ ಸಂದೇಶಗಳನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿ ಶಾಸಕರಾದ ಕ್ಷೇತ್ರದಿಂದ ಬೇಸರವಾಯ್ತು. ಒಂದು ವರ್ಷದಿಂದ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಸರಿಯಿಲ್ಲ. ಎಲ್ಲಾ ಹೇಳಿಕೊಂಡರೂ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬಂಡಾಯ ಶಾಸಕರು ಮತದಾರರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...