alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಅಡ್ಮಿನ್ ನೀವಾದ್ರೆ ತಪ್ಪದೆ ಓದಿ ಸುದ್ದಿ

ಪ್ರತಿದಿನವೂ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುವ ವಾಟ್ಸಾಪ್ ಇದೀಗ ಗ್ರೂಪ್ ಅಡ್ಮಿನ್ ಗಳಿಗೆ ಇನ್ನಷ್ಟು ಪವರ್ ನೀಡಿದೆ.

ಪ್ರಾರಂಭದ ದಿನಗಳಲ್ಲಾದರೆ ಗ್ರೂಪ್ ಅಡ್ಮಿನ್ ಗಳು ಗ್ರೂಪ್ ನ ಇತರ ಸದಸ್ಯರು ಮಾಡುತ್ತಿದ್ದ ಅವಾಂತರಗಳನ್ನು ಸಹಿಸಿಕೊಳ್ಳಬೇಕಾಗಿತ್ತು ಇಲ್ಲವೇ ಗ್ರೂಪ್ ನಿಂದಲೇ ಗೇಟ್ ಪಾಸ್ ನೀಡಬೇಕಾಗಿತ್ತು.

ಕೆಲವೊಂದು ಸದಸ್ಯರಿಗೆ ಎಷ್ಟು ಹೇಳಿದರೂ ಅರ್ಥವಾಗುವುದಿಲ್ಲ. ಅನಗತ್ಯ ಚರ್ಚೆಗಿಳಿಯುತ್ತಾರೆ, ಬೇಕಾಬಿಟ್ಟಿ ಫಾರ್ವರ್ಡ್ ಮೆಸ್ಸೇಜ್ ಗಳನ್ನು ತುರುಕುತ್ತಿರುತ್ತಾರೆ. ಇಂಥವರನ್ನು ಕೆಲವೊಮ್ಮೆ ಗ್ರೂಪ್ ನಿಂದ ಹೊರಗೆ ಕಳುಹಿಸುವ ಹಾಗಿರುವುದಿಲ್ಲ. ಇನ್ನು ಹಾಗಿಲ್ಲ. ಗ್ರೂಪ್ ಅಡ್ಮಿನ್ ಆಗಿರುವವರು ಸದಸ್ಯರನ್ನು ಗಪ್ ಚುಪ್ ಕೂರಿಸಬಹುದು. ಕಾರಣ ಗ್ರೂಪ್ ಗೆ ಯಾರು ಮೆಸ್ಸೆಜ್ ಗಳನ್ನು ಕಳುಹಿಸಬಹುದು ಮತ್ತು ಕಳುಹಿಸಬಾರದು ಎಂಬುದನ್ನು ಅಡ್ಮಿನ್ ಗಳೇ ನಿರ್ಧರಿಸಬಹುದು.

ಈ ವ್ಯವಸ್ಥೆಯಲ್ಲಿ ನಿರ್ಬಂಧಿತ ಸದಸ್ಯರು ಗ್ರೂಪ್ ನಲ್ಲಿ ಎಲ್ಲಾ ಸಂದೇಶಗಳನ್ನು ಓದಬಹುದು. ಆದರೆ ಗ್ರೂಪ್ ಗೆ ತಮ್ಮ ಪ್ರತಿಕ್ರಿಯೆಗಳನ್ನು ಟೈಪಿಸುವ, ಫಾರ್ವರ್ಡ್ ಮೆಸ್ಸೇಜ್ ಗಳನ್ನು, ಫೋಟೋ, ವಿಡಿಯೋಗಳನ್ನು ಹಾಕಲು ಅವಕಾಶವಿರುವುದಿಲ್ಲ.

ಇದಕ್ಕೆ ಮಾಡಬೇಕಾದ್ದಿಷ್ಟೇ, ನಿಮ್ಮ ಗ್ರೂಪ್ ನಲ್ಲಿ ಗ್ರೂಪ್ ಇನ್ಫೋ>ಗ್ರೂಪ್ ಸೆಟ್ಟಿಂಗ್ಸ್>ಸೆಂಡ್ ಮೆಸ್ಸೇಜಸ್ ಗೆ ಹೋಗಿ. ಅಲ್ಲಿ ಆಲ್ ಪಾರ್ಟಿಸಿಪೆಂಟ್ಸ್ ಮತ್ತು ಓನ್ಲಿ ಆಡ್ಮಿನ್ಸ್ ಎಂಬ ಎರಡು ಆಯ್ಕೆಗಳಿರುತ್ತವೆ. ಇದರಲ್ಲಿ ನೀವು ಓನ್ಲಿ ಆಡ್ಮಿನ್ಸ್ ಆಯ್ಕೆ ಮಾಡಿಕೊಂಡಲ್ಲಿ ಮತ್ತೆ ಗ್ರೂಪ್ ನ ಇತರ ಸದಸ್ಯರಿಗೆ ಪ್ರತಿಕ್ರಿಯೆಗೆ ಅವಕಾಶವಿರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...