alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಹೊಸ ಫೀಚರ್ ನಲ್ಲಿದೆ ಈ ಸಮಸ್ಯೆ

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಲೇ ಇದೆ. ಇತ್ತೀಚೆಗಷ್ಟೆ ಗ್ರಾಹಕರಿಗೆ ‘ಡಿಲೀಟ್ ಫಾರ್ ಎವರಿವನ್’ ಆಪ್ಷನ್ ಲಭ್ಯವಾಗಿತ್ತು. ಆದ್ರೆ ಡಿಲೀಟ್ ಮಾಡಿರೋ ಈ ಮೆಸೇಜ್ ಗಳು ಡಿವೈಸ್ ನಲ್ಲೇ ಇರುತ್ತವೆ, ಸುಲಭವಾಗಿ ಅದಕ್ಕೆ ಆ್ಯಕ್ಸೆಸ್ ಪಡೆಯಬಹುದು ಅಂತಾ ಹೇಳಲಾಗ್ತಿದೆ.

ಸ್ಪೇನ್ ನ ಆ್ಯಂಡ್ರಾಯ್ಡ್ ಬ್ಲಾಗ್ ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಸೆಂಡರ್ ಆ ಮೆಸೇಜ್ ಅನ್ನು ಡಿಲೀಟ್ ಮಾಡಿದ್ದರೂ ಅದು ಡಿವೈಸ್ ನಲ್ಲೇ ಇರುತ್ತದೆ. ಆ್ಯಂಡ್ರಾಯ್ಡ್ ಸಿಸ್ಟಮ್ ನ ನೋಟಿಫಿಕೇಶನ್ ರಿಜಿಸ್ಟರ್ ನಲ್ಲಿ ಈ ಮೆಸೇಜ್ ಸ್ಟೋರ್ ಆಗಿರುತ್ತದೆ ಅನ್ನೋದು ಇವರ ವಾದ.

ಗೂಗಲ್ ಪ್ಲೇ ಮೂಲಕ ನೋಟಿಫಿಕೇಶನ್ ಹಿಸ್ಟರಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅದರಲ್ಲಿ ಡಿಲೀಟೆಡ್ ಮೆಸೇಜ್ ಗಳನ್ನೂ ಸರ್ಚ್ ಮಾಡಬಹುದಂತೆ. ಇದಕ್ಕೆ ಹೆಚ್ಚುವರಿ ಆ್ಯಪ್ ನ ಅಗತ್ಯವೂ ಇಲ್ಲ. ಹೋಮ್ ಸ್ಕ್ರೀನ್ ಅನ್ನು ಲಾಂಗ್ ಪ್ರೆಸ್ ಮಾಡಿ, Widgets > Activities > Settings > Notification log ಮೇಲೆ  ಕ್ಲಿಕ್ ಮಾಡಿದ್ರೆ ಡಿಲೀಟೆಡ್ ಮೆಸೇಜ್ ಹುಡುಕಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...