alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರದ ಕಠಿಣ ನಿಲುವಿಗೆ ತಲೆ ಬಾಗಿದ ವಾಟ್ಸಾಪ್

ಸುಳ್ಳು ಸುದ್ದಿಗಳ ಮೇಲೆ ನಿಯಂತ್ರಣ ಹೇರುವಂತೆ ಭಾರತ ಸರ್ಕಾರ, ಕಠಿಣವಾಗಿ ವಾಟ್ಸಾಪ್ ನಿರ್ವಹಣಾ ಮಂಡಳಿಗೆ ಸೂಚಿಸಿದ ಕ್ರಮಕ್ಕೆ ಕೊನೆಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಮೂಲಕ ಕಾರ್ಯದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಫೇಸ್​ಬುಕ್ ಒಡೆತನದ ವಾಟ್ಸಾಪ್ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿ ವಾಟ್ಸಾಪ್ ಪ್ರತ್ಯೇಕ ಅಧಿಕಾರಿಯನ್ನ ನೇಮಕ ಮಾಡಿದೆ.

ಆ ಪ್ರಕಾರ ಕೋಮಲ್ ಲಾಹಿರಿ ಎಂಬವರನ್ನ ಭಾರತದ ವಾಟ್ಸಾಪ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಈ ನೂತನ ಅಧಿಕಾರಿಗೆ ವಾಟ್ಸಾಪ್ ಬಳಕೆದಾರರು ತಮ್ಮ ದೂರು, ಸಲಹೆ ಸೂಚನೆ ಮತ್ತು ಕಾನೂನು ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಬಹುದಾಗಿದೆ. ವಾಟ್ಸಾಪ್​ ನ ವೆಬ್​ಸೈಟ್, ಇ- ಮೇಲ್​ ಮೂಲಕ ಅಧಿಕಾರಿಯನ್ನ ಸಂಪರ್ಕಿಸಬಹುದಾಗಿದೆ.

ಈಗಾಗ್ಲೇ ಸುಳ್ಳು ಸುದ್ದಿ ತಡೆಗೆ ವಾಟ್ಸಾಪ್ ಹಲವು ಕ್ರಮಗಳನ್ನ ಕೈಗೊಂಡಿದೆ. ಫಾರ್ವಡ್ ಸಂದೇಶ ಮತ್ತು ಗ್ರೂಪ್ ಮೆಸೇಜ್​ ಗಳನ್ನ ಫಾರ್ವಡ್ ಮಾಡುವ ಮಿತಿಯನ್ನು 10 ರಿಂದ 5 ಕ್ಕೆ ಇಳಿಸಲಾಗಿದೆ. ಫಾರ್ವಡ್ ಲೇಬಲ್ ಕಾಣುವಂತಾ ವ್ಯವಸ್ಥೆಯನ್ನು ಮಾಡಲಾಗಿದೆ. ಭಾರತದ 20 ಕೋಟಿ ವಾಟ್ಸಾಪ್ ಬಳಕೆದಾರರಿಗೆ ಇನ್ಮುಂದೆ ಇನ್ನಷ್ಟು ಹೊಸ ಫೀಚರ್ಸ್​ಗಳನ್ನು ಮುಂದಿನ ದಿನಗಳಲ್ಲಿ ನೀಡಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...