alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಯ್ತು ಐಷಾರಾಮಿ ಕಾರು

auto

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು 2016-17 ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೈತರ ಏಳಿಗೆಗೆ ಹೆಚ್ಚು ಒತ್ತು ಕೊಟ್ಟಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಬಜೆಟ್ ನಲ್ಲಿ ಕೆಲವೊಂದು ದುಬಾರಿಯಾಗಿದ್ದು, ಅವುಗಳ ಪಟ್ಟಿ ಇಲ್ಲಿದೆ ನೋಡಿ.

ಚಿನ್ನಾಭರಣಗಳ ಮೇಲೆ ಸೆಸ್ ಹೇರಿರುವ ಕಾರಣ ದುಬಾರಿಯಾಗಲಿವೆ. ಐಷಾರಾಮಿ ಕಾರುಗಳ ಬೆಲೆಯೂ ಏರಿಕೆಯಾಗಲಿದೆ. ಬ್ರಾಂಡೆಡ್ ಬಟ್ಟೆ ದುಬಾರಿಯಾಗುವ ಕಾರಣ ಕೊಳ್ಳುವ ಮುನ್ನ ಹಿಂದೆ ಮುಂದೆ ನೋಡಬೇಕಾಗುತ್ತದೆ. ತಂಬಾಕು ಉತ್ಪನ್ನಗಳಾದ ಗುಟ್ಕಾ ಹಾಗೂ ಸಿಗರೇಟ್ ದರ ಸಹ ಏರಿಕೆಯಾಗಲಿದೆ.

ವಾರಾಂತ್ಯಗಳಂದು ಕುಟುಂಬ ಸದಸ್ಯರ ಜೊತೆ ಹೋಟೆಲ್ ಗಳಿಗೆ ಹೋಗಲು ಜೇಬು ತುಂಬಾ ಹಣವಿರಬೇಕಾಗುತ್ತದೆ. ಫೋನ್ ದರಗಳಲ್ಲೂ ಏರಿಕೆಯಾಗಲಿದೆ ಎನ್ನಲಾಗುತ್ತಿದ್ದು, ಬಜೆಟ್ ಅನುಷ್ಟಾನಗೊಂಡ ಬಳಿಕ ಎಲ್ಲದರ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...