alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಬಳಕೆದಾರರು ಓದಲೇ ಬೇಕಾದ ಸುದ್ದಿ

atm cardಕಾರ್ಡ್ ಬಳಸಿ ಎಟಿಎಂ ನಿಂದ ಹಣ ಪಡೆಯುವ ವೇಳೆ ತಾಂತ್ರಿಕ ತೊಂದರೆಯಿಂದಾಗಿ ಕೆಲವೊಮ್ಮೆ ಹಣ ಬರುವುದಿಲ್ಲ. ಆದರೆ ಖಾತೆಯಿಂದ ಹಣ ಕಡಿತಗೊಂಡಿರುತ್ತದೆ. ಈ ಸಂದರ್ಭದಲ್ಲಿ ಇತ್ತ ಹಣವೂ ಕೈಗೆ ಸಿಗದೆ ಖಾತೆಯಲ್ಲಿದ್ದ ಹಣವೂ ಕಡಿತವಾಗುವ ಕಾರಣ ಗ್ರಾಹಕರಿಗೆ ಗಾಬರಿಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ ನೋಡಿ.

ಇಂತಹ ಸಂದರ್ಭಗಳಲ್ಲಿ ಖಾತೆಯಿರುವ ಬ್ಯಾಂಕ್ ಶಾಖೆಯನ್ನು ಕೂಡಲೇ ಸಂಪರ್ಕಿಸಿ. ಒಂದು ವೇಳೆ ಬ್ಯಾಂಕ್ ಬಂದ್ ಆಗಿದ್ದರೆ ಅಥವಾ ರಜಾ ದಿನವಾಗಿದ್ದ ಪಕ್ಷದಲ್ಲಿ ಬ್ಯಾಂಕಿನ ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿ ದೂರು ದಾಖಲಿಸಿ. ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಸಿಗುತ್ತದಾ ನೋಡಿ.

ವಾರದೊಳಗಾಗಿ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ನೀವು ವಹಿವಾಟು ನಡೆಸಿದ ಎಟಿಎಂ ಸ್ಲಿಪ್ ಸಹಿತ ಬ್ಯಾಂಕಿಗೆ ಲಿಖಿತ ದೂರು ಸಲ್ಲಿಸಿ. ಎಟಿಎಂ ಸ್ಲಿಪ್ ಕಳೆದುಕೊಂಡಿದ್ದ ಪಕ್ಷದಲ್ಲಿ ಬ್ಯಾಂಕ್ ಸ್ಟೇಟ್ ಮೆಂಟ್ ಪಡೆದು ಆ ಮೂಲಕ ಲಿಖಿತ ದೂರು ದಾಖಲಿಸಿ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ದೂರು ಸರಿಯಾಗಿದ್ದಲ್ಲಿ ಇದಕ್ಕೆ ಒಂದು ವಾರದೊಳಗಾಗಿ ಬ್ಯಾಂಕ್ ಪರಿಹಾರ ನೀಡಬೇಕಿದೆ. ಇಲ್ಲವಾದಲ್ಲಿ ಈ ಅವಧಿಯ ಬಳಿಕ ದಂಡದ ಸಮೇತ ಬ್ಯಾಂಕ್, ಗ್ರಾಹಕರಿಗೆ ಪರಿಹಾರ ನೀಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...