alex Certify
ಕನ್ನಡ ದುನಿಯಾ       Mobile App
       

Kannada Duniya

ಕುಥಿಯೊಟ್ಟಂ ಆಚರಣೆ ಕುರಿತ ಸಂಕ್ಷಿಪ್ತ ಮಾಹಿತಿ

ಅಟ್ಟುಕಳ ಪೊಂಗಲ ಉತ್ಸವದ ಸಂದರ್ಭದ ಕುಥಿಯೊಟ್ಟಂ ಆಚರಣೆ ವಿರುದ್ಧ ಕೇರಳ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ. ಆಚರಣೆಯ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ನಡೆದಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.

ಏನಿದು ಪೊಂಗಲ ಉತ್ಸವ?

ಕೇರಳದ ತಿರುವನಂತಪುರಂ ನಲ್ಲಿರುವ ಅಟ್ಟುಕಳ ಭಗವತಿ ದೇವಾಲಯದಲ್ಲಿ ಪ್ರತಿವರ್ಷ ಪೊಂಗಲ ಹಬ್ಬದ ವೇಳೆ ಆಚರಿಸಲಾಗುವ ಒಂದು ಉತ್ಸವ. ಈ ಹಬ್ಬದ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಸೇರುತ್ತಾರೆ.

ಕುಥಿಯೊಟ್ಟಂ ಆಚರಣೆ

ಪೊಂಗಲ್ ಉತ್ಸವದ ಒಂದು ಭಾಗವಾಗಿ ಕುಥಿಯೊಟ್ಟಂ ಆಚರಿಸಲಾಗುತ್ತದೆ. ಈ ಆಚರಣೆಯಲ್ಲಿ ಸುಮಾರು ಒಂದು ಸಾವಿರ ಬಾಲಕರು 7 ದಿನಗಳ ಕಾಲ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ದೇವಾಲಯದ ಒಳಭಾಗದಲ್ಲಿಯೇ 7 ದಿನಗಳ ಕಾಲ ಇದ್ದು, ಅಲ್ಲಿಯೇ ಉಪವಾಸ, ಅನುಷ್ಠಾನ ಅಲ್ಲದೇ, ದೇವರ ಜೊತೆಗಿನ ಬಾಂಧವ್ಯದ ಪ್ರತೀಕವಾಗಿ ದೇಹಕ್ಕೆ ಕೊಕ್ಕೆಗಳನ್ನು ಚುಚ್ಚಿಕೊಳ್ಳಲಾಗುತ್ತದೆ.

ಸುದ್ದಿಯಲ್ಲಿದೆ ಕುಥಿಯೊಟ್ಟಂ

ಫೆ.27 ರಂದು ಜಿಡಿಪಿ ಆರ್.ಶ್ರೀಲೇಖಾ ತಮ್ಮ ಬ್ಲಾಗ್ ನಲ್ಲಿ ಕುಥಿಯಟ್ಟಂ ಆಚರಣೆಯ ಬಗ್ಗೆ ಪೋಸ್ಟ್ ಮಾಡಿದ್ದರು. ನಂಬಿಕೆ ಹೆಸರಲ್ಲಿ ಪ್ರತಿವರ್ಷದ ಅಪರಾಧ ನಿಲ್ಲಿಸುವ ಕಾಲ ಬಂದಿದೆ ಎಂಬ ಲೇಖನ ಬರೆದಿದ್ದರು. ಇದಾದ ಬಳಿಕ ಕೇರಳ ಮಕ್ಕಳ ಹಕ್ಕು ರಕ್ಷಣಾ ಆಯೋಗ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...