alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಲ ತೀರಕ್ಕೆ ಬಂದ ಭಾರೀ ಗಾತ್ರದ ತಿಮಿಂಗಿಲ

whale 45

ಕಲುಷಿತವಾಗುತ್ತಿರುವ ಕಡಲು, ಹೆಚ್ಚುತ್ತಿರುವ ಮೀನುಗಾರಿಕೆ, ಹಡಗು, ಬೋಟ್ ಬಳಕೆ ಹೆಚ್ಚಾಗಿರುವುದು ಸೇರಿದಂತೆ ಹಲವಾರು ಕಾರಣಗಳಿಂದ ಇತ್ತೀಚೆಗೆ ಜಲಚರಗಳು ದಡಕ್ಕೆ ಬಂದು ಬೀಳುತ್ತಿರುವ ಪ್ರಕರಣ ಹೆಚ್ಚಾಗಿದೆ. ಮುಂಬೈನಲ್ಲಿ ಇತ್ತೀಚೆಗಷ್ಟೆ ಭಾರಿ ಗಾತ್ರದ ತಿಮಿಂಗಿಲ ಬಂದು ಬಿದ್ದಿತ್ತು.

ಸಮುದ್ರದಲ್ಲಿಯೇ ಮೃತಪಟ್ಟಿದ್ದ ಭಾರಿ ಗಾತ್ರದ ತಿಮಿಂಗಿಲ ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬಂದು ಬಿದ್ದಿತ್ತು. ಅದಕ್ಕಿಂತ ಮೊದಲು ಚೆನ್ನೈ ಹಾಗೂ ಒಡಿಶಾ ಕಡಲ ತೀರದಲ್ಲಿ ಜಲಚರಗಳು ಭಾರೀ ಸಂಖ್ಯೆಯಲ್ಲಿ ಮೃತಪಟ್ಟಿದ್ದವು. ಇದೀಗ ಒಡಿಶಾದ ಬೆರ್ಹಾಂಪುರ ಕಡಲ ತೀರದಲ್ಲಿ ಬರೋಬ್ಬರಿ 33 ಅಡಿ ಉದ್ದದ ಬೃಹತ್ ಗಾತ್ರದ ತಿಮಿಂಗಿಲ ಕಂಡುಬಂದಿದೆ. ಈ ಮೊದಲೇ ಸಮುದ್ರದಲ್ಲಿ ಅದು ಮೃತಪಟ್ಟಿದ್ದು, ಅಲೆಗಳಿಗೆ ಸಿಲುಕಿ ತೀರಪ್ರದೇಶಕ್ಕೆ ಬಂದು ಬಿದ್ದಿದೆ ಎಂದು ಹೇಳಲಾಗಿದೆ.

ಮುಂಬೈನಲ್ಲಿ ಕಂಡುಬಂದಿದ್ದ ತಿಮಿಂಗಿಲ 30 ಅಡಿಗಳಷ್ಟು ಉದ್ದವಿದ್ದರೆ, ಒಡಿಶಾದ ಬೆರ್ಹಾಂಪುರ ಸಮೀಪದ ಗಂಜಾಂ ಕರಾವಳಿ ಪ್ರದೇಶದ ಕಡಲ ತೀರದಲ್ಲಿ ಕಂಡು ಬಂದಿರುವ ಈ ತಿಮಿಂಗಿಲ ಅದಕ್ಕಿಂತ ದೊಡ್ಡದಾಗಿದೆ. 33 ಅಡಿಗಳಷ್ಟು ಉದ್ದವಾಗಿದೆ. ತಿಮಿಂಗಿಲ ನೋಡಲು ಜನಸಾಗರವೇ ನೆರೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...