alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಕಡಲತೀರಕ್ಕೆ ಬಂದ ಬೃಹತ್ ತಿಮಿಂಗಿಲ

whale-2

ಮುಂಬೈ: ಮುಂಬೈನ ಪ್ರಸಿದ್ಧ ಜುಹು ಬೀಚ್ ನಲ್ಲಿ ಬೃಹತ್ ಗಾತ್ರದ ತಿಮಿಂಗಿಲವೊಂದು ಬಂದು ಬಿದ್ದಿದೆ. ಬರೋಬ್ಬರಿ 30 ಅಡಿಗಳಷ್ಟು ಉದ್ದ ಇರುವ ಈ ತಿಮಿಂಗಿಲ ಸಾವನ್ನಪ್ಪಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಜುಹು ಕಡಲ ತೀರಕ್ಕೆ ಎಸೆಯಲ್ಪಟ್ಟಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಚೆನ್ನೈ ಹಾಗೂ ಒಡಿಶಾ ಕಡಲ ತೀರದಲ್ಲಿಯೂ ಇದೇ ರೀತಿ ಜಲಚರಗಳು ಕಾಣಿಸಿಕೊಂಡಿದ್ದವು. ಚೆನ್ನೈ ಸಮುದ್ರ ತೀರದಲ್ಲಿ ಅಪಾರ ಸಂಖ್ಯೆಯ ಸಣ್ಣ ಗಾತ್ರದ ತಿಮಿಂಗಿಲ ಕಂಡುಬಂದಿದ್ದವು. ಒಡಿಶಾದಲ್ಲಿ ಆಮೆಗಳು ಕಂಡುಬಂದಿದ್ದವು. ಇದೀಗ ಮುಂಬೈ ಜುಹು ಬೀಚ್ ನಲ್ಲಿ ಭಾರೀ ಗಾತ್ರದ ತಿಮಿಂಗಿಲ ಕಂಡು ಬಂದಿದ್ದು, ಕುತೂಹಲದಿಂದ ಸಾವಿರಾರು ಜನ ವೀಕ್ಷಿಸಿದ್ದಾರೆ. ಸುಮಾರು 4 ಟನ್ ಗೂ ಅಧಿಕ ತೂಕವಿರುವ ಈ ತಿಮಿಂಗಿಲ ಎರಡು ದಿನಗಳ ಹಿಂದೆಯೇ ಸಾವು ಕಂಡಿರಬಹುದೆಂದು ಹೇಳಲಾಗಿದೆ.

ಸಮುದ್ರದಲ್ಲಿನ ಕಲುಷಿತ ವಾತಾವರಣ ಇಲ್ಲವೇ, ಬೇರೆ ಯಾವುದೋ ಕಾರಣದಿಂದ ಇದು ಮೃತಪಟ್ಟಿರುವ ಸಾಧ್ಯತೆ ಇದ್ದು, ಅಲೆಗಳಿಗೆ ಸಿಲುಕಿ ದಡಕ್ಕೆ ಎಸೆಯಲ್ಪಟ್ಟಿದೆ. ಭಾರೀ ಗಾತ್ರದ ತಿಮಿಂಗಿಲ ಜುಹು ತೀರಕ್ಕೆ ಬಂದು ಬಿದ್ದಿದೆ ಎಂಬ ಸುದ್ದಿ ತಿಳಿದ ಜನ ತಂಡೋಪತಂಡವಾಗಿ ಬಂದು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...