alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದ ಮಧ್ಯೆ ಧ್ವಜಾರೋಹಣ ಮಾಡಿದ ಸೇನೆ

76097d97-eef1-4b53-a8ef-6dac35ffcf4b

ಇಡೀ ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲೆಡೆ ಸಡಗರದಿಂದ ಆಚರಿಸಲಾಗ್ತಿದೆ. ಪ್ರವಾಹದ ನಡುವೆಯೂ ಬಿಹಾರದಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಡಗರ ಕಂಡು ಬಂತು.

ಪ್ರವಾಹದ  ನಡುವೆಯೂ ನೀರಿನ ಮಧ್ಯೆ ನಿಂತು ರಾಷ್ಟ್ರಧ್ವಜಕ್ಕೆ ಜನರು ಗೌರವ ಸಲ್ಲಿಸಿದ್ದಾರೆ. ಪಶ್ಚಿಮ ಚಂಪಾರಣ್ ನಲ್ಲಿ ನೀರಿನ ಮಧ್ಯೆಯೇ ಸೇನಾಪಡೆ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಸ್ವಾತಂತ್ರ್ಯ ದಿನವನ್ನು ಆಚರಿಸ್ತು. ಉಪ ವಿಭಾಗೀಯ ಕಚೇರಿ ಮೈದಾನ ನೀರಿನಿಂದ ಆವೃತವಾಗಿದ್ದು ಈ ಮಧ್ಯೆಯೇ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಂದ ಎಸ್ಡಿಎಂ ಧರ್ಮೇಂದ್ರ ಕುಮಾರ್ ನೋಡಿ ಜನರ ಉತ್ಸಾಹ ಹೆಚ್ಚಾಗಿತ್ತು.

ಜಿಲ್ಲಾ ವರಿಷ್ಠಾಧಿಕಾರಿ ಶಂಕರ್ ಝಾ ಕೂಡ ನೀರಿನ ಮಧ್ಯೆಯೇ ಪೊಲೀಸರ ಜೊತೆ ಧ್ವಜಾರೋಹಣ ಮಾಡಿ ಗೌರವ ಸಲ್ಲಿಸಿದ್ರು. ಅನೇಕ ಸರ್ಕಾರಿ ಕಚೇರಿ ಹಾಗೂ ಶಾಲೆಗಳಿಗೂ ನೀರು ನುಗ್ಗಿದ್ದು, ಅಲ್ಲಿಯೂ ಇದೇ ರೀತಿ ಸ್ವಾತಂತ್ರ ದಿನವನ್ನು ಆಚರಿಸಲಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...