alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಲ್ ಫ್ರೆಂಡ್ ಬ್ಲಾಕ್ ಮೇಲ್ ಗೆ ಹೆದರಿ ಸಾವಿಗೆ ಶರಣಾದ ಪ್ರೇಮಿ

ಕೋಲ್ಕತ್ತಾ: ದಿನ ನಿತ್ಯ ಬೆದರಿಕೆ ಹಾಕುತ್ತಿದ್ದ ಗರ್ಲ್‌ ಫ್ರೆಂಡ್‌ನಿಂದ ಮುಕ್ತಿ ಕಾಣಲು, ಯುವಕನೋರ್ವ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಸೌರವ್‌ ದಾಸ್‌(24) ಆತ್ಮಹತ್ಯೆ ಮಾಡಿಕೊಂಡವನು.

ಪೂಜಾ ದಾಸ್ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ ಸೌರವ್‌ ನನ್ನು, ಪೂಜಾ ಕಳೆದ ಕೆಲ ದಿನಗಳಿಂದ ಅತ್ಯಾಚಾರ ನಡೆಸಿರುವುದಾಗಿ ದೂರು ನೀಡುತ್ತೇನೆ ಎಂದು ದಿನ ನಿತ್ಯ ಹೆದರಿಸುತ್ತಿದ್ದಳು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ಸೌರವ್‌, ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ಗೆಳತಿ ದಿನ ನಿತ್ಯ ಬೆದರಿಕೆ ಹಾಕುತ್ತಿರುವ ಬಗ್ಗೆ ವಿಡಿಯೋ ಮಾಡಿದ್ದಾನೆ.

ಜು.19 ರಂದು ಘಟನೆ ನಡೆದಿದ್ದು, ತಕ್ಷಣ ಸೌರವ್‌ ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಗಂಭೀರ ಗಾಯಗಳಾದ ಕಾರಣ ಚಿಕಿತ್ಸೆ ಫಲಿಸದೆ ಜು.21 ರಂದು ಸೌರವ್‌ ಕೊನೆಯುಸಿರೆಳೆದಿದ್ದಾನೆ. 2 ದಿನಗಳಿಂದ ಪುತ್ರ ಕಾಣೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಹುಡುಗನ ಪೋಷಕರು ದೂರು ನೀಡಿದ ವೇಳೆ ಹುಡುಗನ ಸಾವಿನ ವಿಚಾರ ಗೊತ್ತಾಗಿದೆ.

ಅವರಿಬ್ಬರ ಪ್ರೇಮದ ಕುರಿತು ಸೌರವ್‌ ಕುಟುಂಬಕ್ಕೆ ತಿಳಿದಿತ್ತು. ಹಣ ನೀಡುವಂತೆ ಪೂಜಾ ಮನೆಗೆ ಬಂದೂ ಕೇಳಿದ್ದಳು ಎಂದು ತಂದೆ ಹೇಳಿಕೆ ನೀಡಿದ್ದಾರೆ. ಹಣ ನೀಡದೇ ಹೋದಲ್ಲಿ, ಸೌರವ್‌ ಜೊತೆಗಿರುವ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕುವುದಾಗಿಯೂ ಪೂಜಾ ಹೇಳಿದ್ದಳು. ಸೌರವ್‌ ಹಾಗೂ ಪೂಜಾ ಜತೆಗಿದ್ದ ಕೆಲ ಖಾಸಗಿ ಕ್ಷಣಗಳನ್ನು ಪೂಜಾ ವಿಡಿಯೋ ಮಾಡಿ, ಬೆದರಿಸಲು ಬಳಕೆ ಮಾಡಿದ್ದಳು ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...