alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಚಾಯತಿ ಚುನಾವಣೆ ವೇಳೆ ಹಿಂಸಾಚಾರ: 6 ಮಂದಿ ಸಾವು

ಪಶ್ಚಿಮ ಬಂಗಾಳದ 20 ಜಿಲ್ಲೆಗಳಿಗೆ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಸೋಮವಾರ ಮತದಾನದ ವೇಳೆ ಹಿಂಸಾಚಾರ ನಡೆದಿದೆ.  ಘಟನೆಯಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

ಅನೇಕ ಸ್ಥಳಗಳಲ್ಲಿ ಮತಯಂತ್ರ ಒಡೆದು ಹಾಕುವ ಪ್ರಯತ್ನ ನಡೆದಿದೆ. ಮತದಾನ 5 ಗಂಟೆಯವರೆಗೆ ನಡೆಯಲಿದೆ. ಮೇ 17 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣೆ ವೇಳೆ ನಡೆಯುತ್ತಿರುವ ಹಿಂಸೆ ತಡೆಯಲು ಅಸ್ಸಾಂ, ಒಡಿಶಾ, ಸಿಕ್ಕಿಂ ಮತ್ತು ಆಂಧ್ರಪ್ರದೇಶಗಳಿಂದ 1500 ಭದ್ರತಾ ಸಿಬ್ಬಂದಿಗಳನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳಲಾಗಿದೆ.

ಎರಡು ವಿರೋಧಿ ಗೂಂಡಾಗಳ ನಡುವೆ ಶುರುವಾದ ಗಲಾಟೆ ಹಿಂಸಾಚಾರಕ್ಕೆ ತಿರುಗಿದೆ. ಕೆಲ ಕಡೆ ಮತಯಂತ್ರವನ್ನು ಸುಟ್ಟು ಹಾಕಲಾಗಿದೆ. ಚುನಾವಣಾ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆದಿದೆ ಎನ್ನಲಾಗಿದೆ. 58,692 ಪಂಚಾಯತ್ ಸೀಟುಗಳಿದ್ದು, ಅದ್ರಲ್ಲಿ 20,163 ಸೀಟುಗಳಲ್ಲಿ ತೃಣಮೂಲ ಕಾಂಗ್ರೆಸ್ ಅವಿರೋಧವಾಗಿ ಆಯ್ಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...