alex Certify
ಕನ್ನಡ ದುನಿಯಾ       Mobile App
       

Kannada Duniya

ಸಲಿಂಗಿಗಳೆಂದು ತಿಳಿಯುತ್ತಿದ್ದಂತೆಯೇ ಮನೆ ಖಾಲಿ ಮಾಡಿಸಿದ ಮಾಲೀಕ

ಸಲಿಂಗಕ್ಕೆ ನ್ಯಾಯಾಲಯ ಸಮ್ಮತಿ ನೀಡಿರಬಹುದು, ಆದರೆ ಸಮಾಜ ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬುದಕ್ಕೆ ಒಂದು ಉದಾಹರಣೆ ಸಿಕ್ಕಿದೆ. ಕೊಲ್ಕೊತ್ತಾದಲ್ಲಿ ಇಬ್ಬರು ಯುವಕರು ಸಲಿಂಗಿ ದಂಪತಿ ಎಂದು ಗೊತ್ತಾಗುತ್ತಿದ್ದಂತೆ ಮನೆ ಮಾಲೀಕ ಅವರ ಮೇಲೆ ಹಲ್ಲೆ ನಡೆಸಿ ಆ ಕ್ಷಣದಲ್ಲಿ ಮನೆ ಖಾಲಿ ಮಾಡಿಸಿದ ಘಟನೆ ನಡೆದಿದೆ.

ಕೊಲ್ಕೊತ್ತಾದಿಂದ 65 ಕಿಮೀ ದೂರದಲ್ಲಿರುವ ಚಕ್ಡಾದ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಸ್ವಪನ್ ಬಿಸ್ವಾಸ್ (45) ಮತ್ತು ಬಿಕಾಸ್ ದಾಸ್ (34) ಮನೆ ಮಾಲಿಕ ದಂಪತಿಯಿಂದ ಹಲ್ಲೆಗೊಳಗಾದವರು. ನಮ್ಮ ಮನೆ ಕೊಠಡಿಯೊಳಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಮನೆ ಖಾಲಿ ಮಾಡಲು ಒಂದು ದಿನ ಅವಕಾಶ ಕೇಳಿದರೂ ನೀಡಲಿಲ್ಲ ಎಂದು ದೂರು ದಾಖಲಿಸಿದ್ದಾರೆ.

ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ದೂರುದಾರರು ತಮ್ಮ ಸಂಬಂಧದ ಬಗ್ಗೆ ಉಲ್ಲೇಖಿಸಿಲ್ಲ. ಆದರೆ, ತಮ್ಮನ್ನು ಹಿಜ್ರಾ ಎಂದು ದೂಷಿಸಲಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಇನ್ನು ಮನೆ ಮಾಲೀಕರು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದು, ಪ್ರತಿ ದಿನ ಮದ್ಯ ಸೇವಿಸಿ ಮನೆಗೆ ಬಂದು ಗದ್ದಲ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...