alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತರಿಗೆ ಹೆದರಿಸಲು ಮೊಮೊ ಚಾಲೆಂಜ್ ಕಳಸ್ತಿದ್ದ

ಪಶ್ಚಿಮ ಬಂಗಾಳ ಪೊಲೀಸರು ಮೊಮೊ ಚಾಲೆಂಜ್ ಕಳುಹಿಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆರೋಪಿ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದು, ಹೆಸರು ಬದಲಿಸಿಕೊಂಡು ಸಹಪಾಠಿಗಳಿಗೆ ಮೊಮೊ ಚಾಲೆಂಜ್ ಕಳುಹಿಸುತ್ತಿದ್ದ ಎನ್ನಲಾಗಿದೆ.

ಕೆಲ ದೂರಿನ ಆಧಾರದ ಮೇಲೆ ಪೊಲೀಸರು ಇಂಜಿನಿಯರ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಆರೋಪಿ ಬರ್ಧಮಾನ್ ನಿವಾಸಿಯಾಗಿದ್ದು, 20 ವರ್ಷದ ಅರಿಂದಮ್ ಪಾತ್ರ ಎಂದು ಪೊಲೀಸರು ಹೇಳಿದ್ದಾರೆ. ಯಾವುದೇ ದ್ವೇಷ ಅಥವಾ ಹಿಂಸಾತ್ಮಕ ಉದ್ದೇಶವಿರಲಿಲ್ಲವಂತೆ. ಸ್ನೇಹಿತರಿಗೆ ಹೆದರಿಸಲು ಈ ಕೆಲಸ ಮಾಡಿದ್ದ ಎನ್ನಲಾಗಿದೆ.

ವಿದ್ಯಾರ್ಥಿಗೆ ಜಾಮೀನು ಸಿಕ್ಕಿದೆ. ವಿಚಾರಣೆಗೆ ಸಹಕರಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಮೊಮೊ ವಾಟ್ಸಾಪ್ ಮೂಲಕ ಬರುವ ಚಾಲೆಂಜ್ ಆಗಿದೆ. ಅಪರಿಚಿತ ನಂಬರ್ ನಿಂದ ಮೊಮೊ ಚಾಲೆಂಜ್ ಸ್ವೀಕಾರ ಮಾಡುವಂತೆ ಒತ್ತಡ ಬರಲು ಶುರುವಾಗುತ್ತದೆ. ಇದು ವ್ಯಕ್ತಿಯನ್ನು ಹೆದರಿಸಿ ಆತ್ಮಹತ್ಯೆವರೆಗೆ ಬಂದು ನಿಲ್ಲಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...