alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಾಜಕ್ಕೆ ಹೆದರಿ ಹುಟ್ಟಿದ ಮಗುವನ್ನೇ ಹತ್ಯೆಗೈದ ದಂಪತಿ…!

ಸಮಾಜ ತಮ್ಮ ಬಗ್ಗೆ ಅಸಹ್ಯಪಟ್ಟುಕೊಳ್ಳಬಹುದು ಎಂದು ಭಾವಿಸಿ ನವಜಾತ ಶಿಶುವಿನ ಉಸಿರು ನಿಲ್ಲಿಸಿದ ಹಿರಿಯ ದಂಪತಿಯನ್ನ ಪೊಲೀಸರು ಬಂಧಿಸಿರುವ ಘಟನೆ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ಮಯ್ನಗುರಿಯಲ್ಲಿ ನಡೆದಿದೆ. ದಿಲೀಪ್ ಚಕ್ರವರ್ತಿ ಮತ್ತು ಸುಮತಿ ತಮಗೆ ಹುಟ್ಟಿದ ಆರನೇ ಮಗುವನ್ನು ತಾವೇ ಕೊಂದದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ದಿಲೀಪ್ ಚಕ್ರವರ್ತಿ ಮತ್ತು ಸುಮತಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗ್ಲೇ ಅವರಿಗೆ ಐದು ಮಂದಿ ಮಕ್ಕಳಿದ್ದು ಎಲ್ಲರಿಗೂ ಮದುವೆಯಾಗಿದೆ. ಇತ್ತೀಚೆಗಷ್ಟೇ ಅವರು ತಮ್ಮ ಕೊನೆಯ ಮಗಳ ಮದುವೆಯನ್ನು ಮಾಡಿದ್ದಾರೆ. ಈಗಾಗ್ಲೇ ಐವರು ಮಕ್ಕಳ ಮದುವೆಯಾಗಿದ್ದು, ಮೊಮ್ಮಕ್ಕಳನ್ನು ಆಡಿಸಬೇಕಾದ ಸಂದರ್ಭದಲ್ಲಿ ನಾವೇ ಮಗುವಿಗೆ ತಂದೆ, ತಾಯಿಯಾದ್ರೆ ಸಮಾಜ ಮತ್ತು ಮಕ್ಕಳಿಂದ ಅವಮಾನ ಎದುರಿಸಬೇಕಾಗುತ್ತೆ ಅನ್ನೋ ಕಾರಣಕ್ಕೆ ದಂಪತಿ ಆರನೇ ಮಗುವನ್ನು ಕೊಂದಿದ್ದಾರೆ.

ಕೊನೆಯ ಮಗಳ ಮದುವೆಯ ಸಂದರ್ಭದಲ್ಲಿ ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಸುಮತಿ ಮಗುವನ್ನು ಕೊಲ್ಲುವ ನಿರ್ಧಾರಕ್ಕೆ ಬಂದರಂತೆ. ತನ್ನ ಗಂಡನ ಜೊತೆಗೆ ಚರ್ಚೆ ನಡೆಸಿ ಹುಟ್ಟಿದ ಕೂಡಲೇ ಮಗುವನ್ನು ಕೊಲ್ಲುನ ನಿರ್ಧಾರವನ್ನ ದಂಪತಿ ತೆಗೆದುಕೊಂಡರಂತೆ. ಮಗು ಜನಿಸುವ ಸಂದರ್ಭದಲ್ಲಿ ನೆಂಟರ ಮನೆಗೆ ಹೋಗಿ ಬರ್ತೀವಿ ಅಂತ ಮನೆಯವರಿಗೆ ಹೇಳಿ ಹೋಗಿದ್ದರಂತೆ. ಮಗು ಜನಿಸಿದ ಬಳಿಕ ಪತ್ನಿಯ ಸೀರೆಯಲ್ಲೇ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಕೊಳವೊಂದರಲ್ಲಿ ಎಸೆದಿದ್ದ ದಿಲೀಪ್. ಸ್ಥಳೀಯರು ಮಗುವಿನ ಮೃತದೇಹವನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...