alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲಕರಿಗೆ ಚಹಾ ವಿತರಿಸ್ತಾರೆ ಪೊಲೀಸರು, ಕಾರಣ ಗೊತ್ತಾ?

ಬಾಂಗ್ಲಾದೇಶ ಮತ್ತು ಸಿಲಿಗುರಿಯತ್ತ ಸಾಗುವ ಹೈವೇಯಲ್ಲಿ ವಿಪರೀತ ಮಂಜಿನಿಂದಾಗಿ ಚಳಿಗಾಲದಲ್ಲಿ ಅಪಘಾತಗಳು ಸಂಭವಿಸುತ್ತವೆ. ಇದನ್ನು ತಪ್ಪಿಸಲು ಪಶ್ಚಿಮ ಬಂಗಾಳ ಸರ್ಕಾರ ಹೊಸ ಐಡಿಯಾ ಮಾಡಿದೆ. ಲಾರಿ ಮತ್ತು ಬಸ್ ಚಾಲಕರಿಗೆ ಉಚಿತವಾಗಿ ಚಹಾ ನೀಡುತ್ತಿದೆ.

ಉತ್ತರ 24 ಪರಗಣದ 5 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಎನ್ ಎಚ್ 34 ಮತ್ತು 35ರಲ್ಲಿ 50,000ಕ್ಕೂ ಅಧಿಕ ಬಸ್ ಹಾಗೂ ಲಾರಿಗಳು ಸಂಚರಿಸುತ್ತವೆ. ಬೆಳಗ್ಗೆ ಈ ಮಾರ್ಗದಲ್ಲಿ ವಾಹನ ಚಲಾಯಿಸೋದು ಅಂದ್ರೆ ಹರಸಾಹಸ ಮಾಡಿದಂತೆ.

ಮೊದಲೇ ನಿದ್ದೆಗಣ್ಣು, ಜೊತೆಗೆ ಮಂಜು ಮುಸುಕಿರುವುದರಿಂದ ರಸ್ತೆಯೇ ಸರಿಯಾಗಿ ಕಾಣಿಸುವುದಿಲ್ಲ. ಚಹಾ ಕುಡಿದು ಫ್ರೆಶ್ ಆಗೋಣ ಅಂದ್ರೆ ಈ ಮಾರ್ಗದಲ್ಲಿ ಬೆಳಗಿನ ಜಾವ ಚಹಾ ಅಂಗಡಿಗಳು ತೆರೆದಿರುವುದಿಲ್ಲ. ಹಾಗಾಗಿ ಪೊಲೀಸರೇ ಈಗ ಎಲ್ಲಾ ಲಾರಿ ಮತ್ತು ಬಸ್ ಗಳನ್ನು ತಡೆದು ಚಾಲಕರಿಗೆ ಬಿಸಿ ಬಿಸಿ ಚಹಾ ಕೊಡುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...