alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಮೋ ಚಾಲೆಂಜ್ ಸ್ವೀಕರಿಸುವಂತೆ ಹುಡುಗಿಗೆ ಬಂತು ಸಂದೇಶ

ಬ್ಲೂ ವೇಲ್ ಗೇಮ್ ನಂತ್ರ ಮೋಮೋ ನಿಧಾನವಾಗಿ ಭಾರತಕ್ಕೆ ಕಾಲಿಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಹುಡುಗಿಯೊಬ್ಬಳು ಮೋಮೋಗೆ ಬಲಿಯಾಗಿದ್ದಾಳೆ. ಹುಡುಗಿ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೂ ಮುನ್ನ ನರ ಕತ್ತರಿಸಿಕೊಂಡಿದ್ದಳು. ವಿಚಾರಣೆ ನಡೆಸಿರುವ ಪೊಲೀಸರು ಆತ್ಮಹತ್ಯೆಗೆ ಕಾರಣ ಸ್ಪಷ್ಟಪಡಿಸಿಲ್ಲ. ಈ ಮಧ್ಯೆ ಇನ್ನೊಂದು ಪ್ರಕರಣ ಬಹಿರಂಗವಾಗಿದೆ.

ಪಶ್ಚಿಮ ಬಂಗಾಳದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಒಂದು ನಂಬರ್ ನಿಂದ ಪದೇ ಪದೇ ಕರೆ ಬರ್ತಿದೆ. ಮೋಮೋ ಚಾಲೆಂಜ್ ಸ್ವೀಕರಿಸುವಂತೆ ಒತ್ತಡ ಹೇರಲಾಗ್ತಿದೆ ಎಂದು ಆಕೆ ದೂರಿನಲ್ಲಿ ಹೇಳಿದ್ದಾಳೆ. ವಿದ್ಯಾರ್ಥಿನಿ ತಾಯಿ ಜೊತೆ ಜಗಳ ಮಾಡಿಕೊಂಡ ನಂತ್ರ ಪ್ರಾಣ ಬಿಡಲು ಇಷ್ಟಪಡ್ತೇನೆಂದು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಹಾಕಿದ್ದಳಂತೆ. ಇದಾದ ನಂತ್ರ ಆಕೆ ವಾಟ್ಸಾಪ್ ನಂಬರ್ ಗೆ ಕರೆ ಬರಲು ಶುರುವಾಗಿದೆಯಂತೆ.

ಸಂದೇಶ ನೋಡಿ ಹೆದರಿದ ಹುಡುಗಿ ಸಹೋದರನಿಗೆ ವಿಷ್ಯ ತಿಳಿಸಿದ್ದಾಳಂತೆ. ನಂತ್ರ ಪೊಲೀಸರಿಗೆ ದೂರು ನೀಡಿದ್ದಾಳೆ. ಮೋಮೋ ಬ್ಲೂ ವೇಲ್ ಹೋಲುತ್ತದೆ. ವಾಟ್ಸಾಪ್ ನಲ್ಲಿ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸುತ್ತಾನೆ. ಇದನ್ನು ಸ್ವೀಕರಿಸಿ ಆತ ಹೇಳಿದಂತೆ ಕೇಳದೆ ಹೋದಲ್ಲಿ ಶಿಕ್ಷೆ ನೀಡುವುದಾಗಿ ಬೆದರಿಸುತ್ತಾನೆ. ಭಯಗೊಂಡ ವ್ಯಕ್ತಿಗಳು ಹೇಳಿದಂತೆ ಮಾಡಲು ಶುರು ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...