alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಮಾರಾಟ ಜಾಲದಲ್ಲಿ ಬಿ.ಜೆ.ಪಿ. ನಾಯಕಿ ಅರೆಸ್ಟ್

bjp-mahila

ಕೋಲ್ಕತಾ: ಮಕ್ಕಳ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ, ಪಶ್ಚಿಮ ಬಂಗಾಳದ ಬಿ.ಜೆ.ಪಿ. ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜೂಹಿ ಚೌಧರಿ ಅವರನ್ನು ಬಂಧಿಸಲಾಗಿದೆ.

ಉತ್ತರ ಬಂಗಾಳದ ಜಲಪೈಗುರಿಯಲ್ಲಿ ಬಿಮಲಾ ಶಿಶುಗೃಹ ಸ್ವಯಂಸೇವಾ ಸಂಸ್ಥೆಯೊಂದಿಗೆ ಸೇರಿ, ಮಕ್ಕಳನ್ನು ದತ್ತು ನೀಡುವ ನೆಪದಲ್ಲಿ ಜೂಹಿ ಮಾರಾಟ ಮಾಡುತ್ತಿದ್ದಳು.

ಸಿ.ಐ.ಡಿ. ಪ್ರಕರಣದ ತನಿಖೆ ಕೈಗೊಂಡಿದ್ದು, ಕಳೆದ ವಾರ ಸಂಸ್ಥೆಯ ಅಧ್ಯಕ್ಷೆ ಚಂದನಾ ಚಕ್ರವರ್ತಿ, ದತ್ತು ಅಧಿಕಾರಿ ಸೋನಾಲಿ ಮಂಡಲ್ ಅವರನ್ನು ಬಂಧಿಸಿತ್ತು.

ಜೂಹಿ ಚೌಧರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತಲೆ ಮರೆಸಿಕೊಂಡಿದ್ದ ಆಕೆಯನ್ನು ನೇಪಾಳ ಗಡಿಯ ಬತಾಸಿಯಾದಲ್ಲಿ ಬಂಧಿಸಲಾಗಿದೆ.

ಈ ತಂಡ ಸುಮಾರು 25 ಮಕ್ಕಳನ್ನು ದೇಶ, ವಿದೇಶಗಳಲ್ಲಿ ಮಾರಾಟ ಮಾಡಿದೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...