alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಯುವ ಮುನ್ನ ಸೆಲ್ಫಿ ತೆಗೆದು ವಾಟ್ಸಾಪ್ ಗೆ ಹಾಕಿದ ಹುಡುಗಿಯರು

ಮುಂಬೈನಲ್ಲೊಂದು ದಾರುಣ ಘಟನೆ ನಡೆದಿದೆ. 17 ವರ್ಷದ ಇಬ್ಬರು ಹುಡುಗಿಯರು ತಾವು ಸಾವಿಗೆ ಶರಣಾಗುವ ಮುನ್ನ ಬಾವಿಯ ಮುಂದೆ ಸೆಲ್ಫಿ ತೆಗೆದುಕೊಂಡು ಅದನ್ನು ವಾಟ್ಸಾಪ್ ಡಿಪಿ ಹಾಕಿ ಬಳಿಕ ಅದೇ ಬಾವಿಗೆ ಹಾರಿ ಸಾವನ್ನಪ್ಪಿದ್ದಾರೆ.

ಮಂಗಳವಾರದಂದು ಈ ಘಟನೆ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಮನೆಯಿಂದ ಬಂದ ಈ ಹುಡುಗಿಯರು ನಿರ್ಜನ ಪ್ರದೇಶದಲ್ಲಿದ್ದ ಬಾವಿ ಬಳಿ ಹೋಗಿದ್ದಾರೆ. ಬಳಿಕ ಅದರ ಮುಂದೆಯೇ ಸೆಲ್ಫಿ ತೆಗೆದುಕೊಂಡು ಅದನ್ನು ವಾಟ್ಸಾಪ್ ಡಿಪಿ ಮಾಡಿದ್ದಾರಲ್ಲದೆ, ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸಿದ್ದಾರೆ.

ನಂತರ ಸ್ನೇಹಿತನೊಬ್ಬನಿಗೆ ಕರೆ ಮಾಡಿ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಆತ, ಹುಡುಗಿಯರ ಕುಟುಂಬಕ್ಕೆ ವಿಷಯ ತಿಳಿಸಿದ್ದು, ಅವರು ಬರುವಷ್ಟರಲ್ಲಿಯೇ ಇವರುಗಳು ಸಾವಿಗೆ ಶರಣಾಗಿದ್ದರೆನ್ನಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂಬುದು ಬಹಿರಂಗವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...