alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಇಳಿಸಿಕೊಳ್ಳುವ ಭರದಲ್ಲಿ ಹಾಸಿಗೆ ಹಿಡಿದ ಮಹಿಳೆ

ತೂಕ ಇಳಿಸಿಕೊಳ್ಳುವ ಥೆರಪಿಯೊಂದು ಮಹಿಳೆಗೆ ದುಬಾರಿಯಾಗಿ ಪರಿಣಮಿಸಿದೆ. ನಾಂದೇಡಾದ 33 ವರ್ಷದ ಗೌರಿ ಪ್ರಕೃತಿ ಚಿಕಿತ್ಸೆ ಆಧಾರಿತ ತೂಕ ನಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಳು. ಈ ಥೆರಪಿ ಗೌರಿ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದೆ. ನರವೈಜ್ಞಾನಿಕ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಆಕೆಗೆ ನಡೆಯಲು, ಮಾತನಾಡಲು, ಸರಿಯಾಗಿ ಕುಳಿತುಕೊಳ್ಳಲೂ ಸಾಧ್ಯವಾಗ್ತಿಲ್ಲ.

ಆಗಸ್ಟ್ 26,2017 ರಂದು ನಿಸಾರಗಂಜಲಿ ಹೆಸರಿನ ಆಸ್ಪತ್ರೆಗೆ ಗೌರಿ ದಾಖಲಾಗಿದ್ದಳು. ಸುನೀಲ್ ಕುಲ್ಕರ್ಣಿ ಎಂಬಾತ ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅಲ್ಲಿ ಪ್ರಕೃತಿ ಚಿಕಿತ್ಸೆ ಮೂಲಕ ತೂಕ ಇಳಿಸಿಕೊಳ್ಳಲು ಮುಂದಾದ ಗೌರಿ 20 ದಿನಗಳ ನಂತ್ರ ಮನೆಗೆ ಬಂದಿದ್ದಳು. ವೈದ್ಯರ ಸಲಹೆ ಮೇರೆಗೆ ಮಾತ್ರೆ ಸೇವನೆ ಮಾಡುತ್ತಿದ್ದಳು.

ನವೆಂಬರ್ ನಲ್ಲಿ ಅಚಾನಕ್ ಆಕೆ ಆರೋಗ್ಯ ಹದಗೆಟ್ಟಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯ್ತು. ಆದ್ರೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ನಂತ್ರ ಹೈದ್ರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ನರವೈಜ್ಞಾನಿಕ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂಬ ಸಂಗತಿ ಗೊತ್ತಾಯ್ತು. ಔಷಧಿಯಿಂದಾಗಿ ಮೆದುಳು ಹಾನಿಗೊಳಗಾಗಿದೆ ಎಂದು ವೈದ್ಯರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...