alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕಿ ಪುತ್ರಿಯ ಮದುವೆ ವೈಭೋಗ ನೋಡಿ ದಂಗಾಗಿದ್ದಾರೆ ಜನ

kerala-mla-daughter-wedding_650x400_71496753786

ಕೇರಳದ ಸಿಪಿಐ ಶಾಸಕಿ ಗೀತಾ ಗೋಪಿ ಅವರ ಪುತ್ರಿಯ ಮದುವೆ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಶಾಸಕಿಯ ಮಗಳು ಧರಿಸಿರೋ ಕೆಜಿಗಟ್ಟಲೆ ಆಭರಣ ನೋಡಿ ಜನ ದಂಗಾಗಿದ್ದಾರೆ. ಕಳೆದ ಭಾನುವಾರ ತ್ರಿಶೂರ್ ನಲ್ಲಿ ಈ ಮದುವೆ ನೆರವೇರಿದೆ.

ಈ ಅದ್ಧೂರಿ ಮದುವೆ ವಿಚಾರ ಪಕ್ಷದಲ್ಲೂ ಚರ್ಚೆಗೆ ಗ್ರಾಸವಾಗಿದೆ. ನಟ್ಟಿಕಾ ಕ್ಷೇತ್ರದಿಂದ ಗೀತಾ ಗೋಪಿ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಅವರದ್ದೇ ಪಕ್ಷದ ಮುಖಂಡರಾದ ಮುಲ್ಲಕರ ರತ್ನಾಕರನ್, ಕಳೆದ ಎಪ್ರಿಲ್ ನಲ್ಲಿ ಅದ್ಧೂರಿ ಮದುವೆಗಳ ವಿರುದ್ಧ ಸದನದಲ್ಲಿ ಧ್ವನಿಯೆತ್ತಿದ್ದರು.

ಆಡಂಬರದ ಮದುವೆಗಳಿಗೆ ಬ್ರೇಕ್ ಹಾಕುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪಿನರಾಯಿ ವಿಜಯನ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಆರೋಪ ಮಾಡಿದ್ದರು. ಆದ್ರೆ ಈಗ ಅವರ ಪಕ್ಷದ ಶಾಸಕಿಯೇ ತಮ್ಮ ಪುತ್ರಿಯ ಮದುವೆಯನ್ನು ವೈಭೋಗದಿಂದ ಮಾಡಿದ್ದಾರೆ.

ವಧು ಸಂಪೂರ್ಣ ಚಿನ್ನದ ಆಭರಣಗಳಲ್ಲೇ ಮುಳುಗಿ ಹೋಗಿರೋದು ಫೋಟೋಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಗೀತಾ ಗೋಪಿ ಅವರ ಈ ಅದ್ಧೂರಿತನ ಪಕ್ಷದ ಇಮೇಜ್ ಗೆ ಧಕ್ಕೆ ತಂದಿದೆ ಅಂತಾ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...