alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮುಗಿದ ಮೇಲೆ ಶುರುವಾಯ್ತು ಖರ್ಚಿನ ಬಗ್ಗೆ ಜಗಳ

ಲುಧಿಯಾನಾದಲ್ಲಿ ನಡೆದ ಮದುವೆಯೊಂದು ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಜಲಂಧರ್ ಬೈಪಾಸ್ ಬಳಿಯಿರೋ ಮಲ್ಹೋತ್ರಾ ರೆಸಾರ್ಟ್ಸ್ ನಲ್ಲಿ ಭಾರತಿ ಹಾಗೂ ಗಗನ್ ದೀಪ್ ಸಿಂಗ್ ಎಂಬ ಜೋಡಿಯ ಮದುವೆಯಿತ್ತು. ಮದುವೆ ಸಂಪ್ರದಾಯಗಳೆಲ್ಲ ಶಾಸ್ತ್ರೋಕ್ತವಾಗಿ ನೆರವೇರಿದ್ವು.

ಕೊನೆಯಲ್ಲಿ ವಧುವನ್ನು ವರನ ಮನೆಗೆ ಬೀಳ್ಕೊಡುವ ಶಾಸ್ತ್ರ ನಡೆಯುತ್ತಿತ್ತು. ಈ ವೇಳೆ ವರನ ಕಡೆಯವರು ವರದಕ್ಷಿಣೆ ಕೇಳಿದ್ದಾರೆ, ಹಾಗಾಗಿ ತಾನು ಗಂಡನ ಮನೆಗೆ ಹೋಗುವುದಿಲ್ಲ ಅಂತಾ ವಧು ಪಟ್ಟು ಹಿಡಿದಿದ್ದಾಳೆ. ಮದುವೆ ಖರ್ಚಿನ ಕುರಿತಂತೆ ವಧು-ವರನ ಕುಟುಂಬದವರ ಮಧ್ಯೆ ಕಿತ್ತಾಟ ನಡೆದಿದೆ.

ವರನ ಮನೆಗೆ ತೆರಳಲು ವಧು ಭಾರತಿ ಬಿಲ್ ಕುಲ್ ಒಪ್ಪಿಲ್ಲ. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಜಗಳವೇನೋ ಬಗೆಹರಿದಿದೆ. ಆದ್ರೆ ಎರಡೂ ಕುಟುಂಬಗಳ ಸಮ್ಮತಿ ಮೇರೆಗೆ ಮದುವೆಯನ್ನು ರದ್ದು ಮಾಡಲಾಯ್ತು. ವಧು ತನ್ನ ಹೆತ್ತವರೊಂದಿಗೆ ತವರಿಗೆ ತೆರಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...