alex Certify
ಕನ್ನಡ ದುನಿಯಾ       Mobile App
       

Kannada Duniya

ಚಿರನಿದ್ದೆಗೆ ಜಾರಿದ ತಾಯಿ ಮಗ್ಗುಲಲ್ಲೇ ಮಲಗಿದ್ದ ಮಗ

ಹೈದರಾಬಾದ್: ಎಂತಹವರ ಮನವನ್ನೂ ಕಲಕುವಂತಹ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಭಾನುವಾರ ರಾತ್ರಿ 11.30 ಕ್ಕೆ ಏದುಸಿರು ಬಿಡುತ್ತಾ ಮಹಿಳೆಯೊಬ್ಬರು ಬಂದಿದ್ದಾರೆ. ಆಕೆಯೊಂದಿಗೆ 5 ವರ್ಷ ವಯಸ್ಸಿನ ಬಾಲಕನ ಹೊರತಾಗಿ ಯಾರೂ ಇರಲಿಲ್ಲ. ಬಾಲಕನ ಕೈಯಲ್ಲಿ ಆಧಾರ್ ಕಾರ್ಡ್ ಇತ್ತು.

ಮಹಿಳೆಗೆ ಹೃದಯಾಘಾತವಾಗಿದ್ದು, ಆಕೆ ಆಸ್ಪತ್ರೆಗೆ ಬಂದ ಕೂಡಲೇ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ. ತಾಯಿಗೆ ಚಿಕಿತ್ಸೆ ನೀಡುತ್ತಿದ್ದರೆ, ಆಕೆಯೊಂದಿಗೆ ಬಂದಿದ್ದ ಬಾಲಕ ಮಗ್ಗುಲಲ್ಲೇ ಮಲಗಿದ್ದಾನೆ.

ಸ್ವಲ್ಪ ಸಮಯದ ನಂತರ ಹಠಾತ್ ಹೃದಯಾಘಾತದಿಂದ ಮಹಿಳೆ ಮೃತಪಟ್ಟಿದ್ದು, ಇದನ್ನು ಅರಿಯದ ಬಾಲಕ ನಿದ್ದೆಗೆ ಜಾರಿದ್ದಾನೆ. ಆತನ ಕೈಯಲ್ಲಿದ್ದ ಆಧಾರ್ ಕಾರ್ಡ್ ಆಧರಿಸಿ ಮೃತ ಮಹಿಳೆಯ ಗುರುತನ್ನು ಪತ್ತೆ ಹಚ್ಚಲಾಗಿದೆ.

ಮಹಿಳೆಯ ಹೆಸರು ಸಮೀನಾ ಸುಲ್ತಾನಾ ಆಗಿದ್ದು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದಳು. 3 ವರ್ಷಗಳ ಹಿಂದೆ ಪತಿ ಬಿಟ್ಟು ಹೋಗಿದ್ದರಿಂದ ರಾಜೇಂದ್ರನಗರದಲ್ಲಿ ಬೇರೆ ವ್ಯಕ್ತಿಯೊಂದಿಗೆ ವಾಸವಾಗಿದ್ದಳು. ಆದರೆ, ಆತ ಕೇರ್ ಮಾಡದ ಕಾರಣ ಸಮೀನಾ ಆರೋಗ್ಯ ಹದಗೆಟ್ಟಿತ್ತು. ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿ, ಆಧಾರ್ ಹಾಗೂ ಹೆಲ್ಪಿಂಗ್ ಹ್ಯಾಂಡ್ ಫೌಂಡೇಷನ್ ನೆರವಿನಿಂದ ಮಹಿಳೆಯ ಸಂಬಂಧಿಕರನ್ನು ಪತ್ತೆ ಹಚ್ಚಿ ಅವರ ವಶಕ್ಕೆ ಬಾಲಕನನ್ನು ಒಪ್ಪಿಸಿದ್ದಾರೆ. ಸ್ವಂತ ಊರಿಗೆ ಮೃತದೇಹ ಕೊಂಡೊಯ್ಯಲು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...