alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪ್ರಧಾನಿ ಮೋದಿಯವರ ಈ ವಿಡಿಯೋ

ನವದೆಹಲಿ: ಸಾಮಾನ್ಯವಾಗಿ ಸಂಚಾರ ನಿಯಮ ಪಾಲನೆ ಎಂದರೆ ಎಲ್ಲರಿಗೂ ಅಸಡ್ಡೆಯೇ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರದಲ್ಲಿ ಎಲ್ಲರಿಗೂ ಮಾದರಿ. ಇಂಥದ್ದೊಂದು ಸಂದೇಶ ಸಾರುವ ವಿಡಿಯೋ ಈಗ ಎಲ್ಲೆಡೆ ಹರಿದಾಡಿದೆ.

ಪಿಐಬಿ ಬಿಡುಗಡೆ ಮಾಡಿರುವ ಪ್ರಧಾನಿ ಮೋದಿಯವರ ವಿಡಿಯೋ ಈಗ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಏಕೆಂದರೆ ಅವರು ತಮ್ಮ ಕಾರು ಏರಿದಾಕ್ಷಣ ಮೊದಲಿಗೆ ಸೀಟು ಬೆಲ್ಟ್ ಹಾಕಿಕೊಳ್ಳುತ್ತಾರೆ.

ಕಪ್ಪು ಬಣ್ಣದ ಬ್ಲಾಕ್ ರೇಂಜ್ ರೋವರ್ ಕಾರಿನಲ್ಲಿ ಕುಳಿತುಕೊಳ್ಳುವ ಮೊದಲು ಮೋದಿ ಜನರತ್ತ ಕೈಬೀಸುತ್ತಾರೆ. ಬಳಿಕ ಸೀಟ್ ಬೆಲ್ಟ್ ಧರಿಸುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಇದೀಗ ಪಿಐಬಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದೊಂದಿಗೆ ಸೀಟ್ ಬೆಲ್ಟ್ ಧರಿಸಿ ಎಂಬ ಸಂದೇಶವನ್ನೂ ಅಡಕಗೊಳಿಸಲಾಗಿದೆ.

ಈ ಟ್ವೀಟರ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಮಂಜುಳ್ ಕೌಸ್ತುಭ್ ಎಂಬುವರು ಪ್ರತಿಕ್ರಿಯಿಸಿ, ಕಾನೂನು ಪಾಲಿಸುವ ಪ್ರಧಾನಿ ಮೋದಿಯವರು ನಿಜವಾದ ನಾಯಕ ಎಂದು ಬಣ್ಣಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...