alex Certify
ಕನ್ನಡ ದುನಿಯಾ       Mobile App
       

Kannada Duniya

ಚರ್ಚೆಗೆ ಕಾರಣವಾಯ್ತು ವಿರಾಟ್ ಕೊಹ್ಲಿ ಟೀ ಶರ್ಟ್

ko t sjirt

ಬೆಸ್ಟ್ ಜೋಡಿ ಎಂದೇ ಹೆಸರಾಗಿದ್ದ ಟೀಂ ಇಂಡಿಯಾ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಅವರ ನಡುವೆ, ವಿರಸ ಉಂಟಾಗಿ ಇಬ್ಬರೂ ಬೇರೆಯಾಗಿದ್ದರು. ಸ್ವಲ್ಪ ದಿನ ದೂರವಾಗಿದ್ದ ಇವರು ಬಳಿಕ ಒಟ್ಟಿಗೆ ಕಾಣಿಸಿಕೊಂಡಿದ್ದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಮುಂಬೈನ ಬಾಂದ್ರಾದಲ್ಲಿರುವ ಪ್ರತಿಷ್ಠಿತ ಹೋಟೆಲ್ ಒಂದಕ್ಕೆ ಡಿನ್ನರ್ ಗೆ ಹೋಗಿದ್ದು ಭಾರೀ ಸುದ್ದಿಯಾಗಿತ್ತು. ಇವರ ಲವ್ ಬ್ರೇಕ್ ಅಪ್ ಆದ ಬಳಿಕ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರು. ಅದೆಲ್ಲಾ ಇರಲಿ, ಇದೀಗ ವಿರಾಟ್ ಕೊಹ್ಲಿಯ ಟೀ ಶರ್ಟ್ ಚರ್ಚೆಗೆ ಕಾರಣವಾಗಿದೆ. We were on a break ಎಂದು ಬರೆದಿರುವ ಟೀ ಶರ್ಟ್ ಅನ್ನು ಕೊಹ್ಲಿ ತೊಟ್ಟಿದ್ದು, ಇದು ಅವರ ನಡೆಯನ್ನು ತೋರಿಸುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.

We were on a break ಎಂದು ಬರೆದಿರುವ ಟೀ ಶರ್ಟ್ ನಲ್ಲಿ ಸೂಪರ್ ಮ್ಯಾನ್ ಗೆ ಯುವತಿಯೊಬ್ಬಳು ಎದುರಾಗಿರುವ ಚಿತ್ರ ಕೂಡ ಇದ್ದು, ಇದು ಕೊಹ್ಲಿ ಹಾಗೂ ಅನುಷ್ಕಾ ಅವರ ನಡೆಯನ್ನು ಬಿಂಬಿಸುವಂತಿದೆ ಎಂಬ ಮಾತುಗಳು ಕೇಳಿಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...