alex Certify
ಕನ್ನಡ ದುನಿಯಾ       Mobile App
       

Kannada Duniya

ವಾಸ್ತವ ಚಿತ್ರಣ ಬಿಚ್ಚಿಟ್ಟ ಸೈನಿಕನ ಸೆಲ್ಫಿ ವಿಡಿಯೋ

yodah

ನವದೆಹಲಿ: ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೇ, ಒತ್ತೆ ಇಟ್ಟು ಹೋರಾಡುವ, ಸೈನಿಕರ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದೆ ವೈರಲ್ ಆಗಿರುವ ಸೆಲ್ಫಿ ವಿಡಿಯೋ.

ಜಮ್ಮು ಮತ್ತು ಕಾಶ್ಮೀರದ ಬಿ.ಎಸ್.ಎಫ್. 29 ನೇ ಬೆಟಾಲಿಯನ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧ ತೇಜ್ ಬಹದ್ದೂರ್ ಯಾದವ್ ಅವರು, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ.

ಅದರಲ್ಲಿ ತಮಗೆ ಒಣಗಿದ ಪರೋಟ, ಅರಿಶಿಣದ ನೀರನ್ನು ದಾಲ್ ಎಂದು ಕೊಡಲಾಗುತ್ತಿರುವ ಬಗ್ಗೆ ವಾಸ್ತವ ಚಿತ್ರಣವನ್ನು ಬಹಿರಂಗಪಡಿಸಿದ್ದಾರೆ.

ಬಿ.ಎಸ್.ಎಫ್. ಯೋಧನ ಮಾತುಗಳಿವು ಎಂದು ಅಳಲು ತೋಡಿಕೊಂಡಿರುವ ತೇಜ್ ಬಹದ್ದೂರ್, ತಮ್ಮ ಸಮಸ್ಯೆಗಳು ಯಾರ ಗಮನಕ್ಕೂ ಬರುವುದಿಲ್ಲ. ಅರಿಶಿಣದ ನೀರಿನ ದಾಲ್, ಒಣಗಿದ ಪರೋಟ ತಿಂದು 10-12 ಗಂಟೆಗಳ ಕಾಲ ಗಡಿಯಲ್ಲಿ ಕೆಲಸ ಮಾಡುತ್ತೇವೆ. ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೇ ಕೆಲಸ ಮಾಡುವ ನಮ್ಮ ಸ್ಥಿತಿ ಹೀಗಿದೆ ಎಂದೆಲ್ಲಾ ಹೇಳಿದ್ದಾರೆ.

ನಮ್ಮ ಸಂಕಷ್ಟವನ್ನು ತಿಳಿಸಲು ಈ ವಿಡಿಯೋ ಮಾಡಿದ್ದೇನೆ. ಸರ್ಕಾರ ನಮಗೆ ಎಲ್ಲವನ್ನು ಕೊಟ್ಟಿದ್ದರೂ, ಮೇಲಧಿಕಾರಿಗಳಿಂದಾಗಿ ನಮಗೆ ಏನೂ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

yoda-33

ಸೈನಿಕರು ಖಾಲಿ ಹೊಟ್ಟೆಯಲ್ಲಿ ಕೆಲಸ ಮಾಡುತ್ತ ಅನುಭವಿಸುತ್ತಿರುವ ಸಂಕಷ್ಟವನ್ನು ತೇಜ್ ಬಹದ್ದೂರ್ ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಿರುವ ಈ ವಿಡಿಯೋ ವೈರಲ್ ಆಗಿದೆ.

ಘಟನೆ ಬೆಳಕಿಗೆ ಬರುತ್ತಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತನಿಖೆ ನಡೆಸಿ, ವರದಿ ನೀಡುವಂತೆ ಆದೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...