alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವಕ್ಕೆ ಎರವಾಯ್ತು ಚಾಲನೆ ವೇಳೆ ಮಾಡಿದ ವಿಡಿಯೋ

ಉತ್ತರಾಖಂಡ್‌: ವಿಡಿಯೋ ಮಾಡುತ್ತ ವಾಹನ ಚಲಾಯಿಸಿರುವುದು ಯುವಕರ ಜೀವಕ್ಕೆ ಕಂಠಕವಾಗಿದೆ. ಒಬ್ಬ ಯುವಕನ ಬದುಕೇ ಕೊನೆಯಾಗಿದೆ.

ಮೂವರು ಸ್ನೇಹಿತರು ಉತ್ತರಾಖಂಡದ ನೈನಿತಾಲ್‌ನ ಗುಡ್ಡಗಾಡು ಮಾರ್ಗದಲ್ಲಿ ಸಂಚಾರ ಮಾಡುವ ವೇಳೆ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಈ ವೇಳೆ ಡ್ರೈವಿಂಗ್‌ ಸೀಟ್‌ನಲ್ಲಿದ್ದ ಯುವಕನೂ ಒಂದು ಕ್ಷಣ ಮೊಬೈಲ್‌ ನೋಡಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ವಾಹನ, ಪ್ರಪಾತಕ್ಕೆ ಉರುಳಿ, ಒಬ್ಬ ಮೃತಪಟ್ಟು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಸೈನ್ಯದಲ್ಲಿರುವ ಬಿರೇಂದ್ರ ಕುಮಾರ್‌ ಮೃತ ದುರ್ದೈವಿ. ಬಿರೇಂದ್ರ ಕುಮಾರ್‌ ಸಹೋದರ ಸಂಜು ಕುಮಾರ್‌ ಹಾಗೂ ಸ್ನೇಹಿತ ದೀಪಿ ದನಿ ಗಾಯಗೊಂಡವರು. ಸೈನ್ಯದಲ್ಲಿರುವ ಬಿರೇಂದ್ರ ಕುಮಾರ್ ರಜೆ ಮೇಲೆ ನೈನಿತಾಲ್‌ನಲ್ಲಿರುವ ಮನೆಗೆ ಬಂದಿದ್ದ ಎಂದು ತಿಳಿದು ಬಂದಿದೆ.

ವಾಹನ ಚಲಾವಣೆ ವೇಳೆ ಮೊಬೈಲ್‌ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅವಘಡಗಳು ಸಂಭವಿಸುತ್ತಿದೆ. ಅದರಲ್ಲೂ ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವ ವೇಳೆ ದುರ್ಘಟನೆ ಸಂಭವಿಸಿರುವುದೇ ಹೆಚ್ಚು ಎಂದು ಪೊಲೀಸ್‌ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...