alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರಾಟ ಶುರು ಮಾಡ್ತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ವಾಟರ್ ಟ್ಯಾಂಕರ್

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಡೆಯಬೇಕಿದ್ದ ದುರ್ಘಟನೆಯೊಂದು ಅದೃಷ್ಟವಶಾತ್ ತಪ್ಪಿದೆ. ಹಾರಾಟ ಶುರು ಮಾಡ್ತಿದ್ದ ವಿಮಾನಕ್ಕೆ ನೀರಿನ ಟ್ರಕ್ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿದ್ದ 100 ಪ್ರಯಾಣಿಕರು ಘಟನೆಯಿಂದ ಆತಂಕಗೊಂಡಿದ್ದರು ಎನ್ನಲಾಗಿದೆ. ಆದ್ರೆ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ವಿಮಾನದ ಮುಂದಿನ ಭಾಗಕ್ಕೆ ಹಾನಿಯಾಗಿದೆ.

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ. ಕತಾರ್ ಏರ್ ವೇಸ್ ವಿಮಾನಕ್ಕೆ ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ತಕ್ಷಣ ವಿಮಾನ ಹಾರಾಟ ನಿಲ್ಲಿಸಿ ಪರೀಕ್ಷೆ ನಡೆಸಲಾಗಿದೆ. ಘಟನೆ ಬೆಳಗಿನ ಜಾವ ನಡೆದಿದೆ. ಘಟನೆಯಿಂದ ಪ್ರಯಾಣಿಕರು ಭಯಗೊಂಡಿದ್ದರು. ಹೊಟೇಲ್ ನಲ್ಲಿ ವಿಶ್ರಾಂತಿಗೆ ಅವಕಾಶ ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ವಿಮಾನದಲ್ಲಿ 103 ಮಂದಿಯಿದ್ದರು ಎನ್ನಲಾಗಿದೆ. ವಿಮಾನ ಕೋಲ್ಕತ್ತಾದಿಂದ ದೋಹಾಕ್ಕೆ ತೆರಳುತ್ತಿತ್ತು. ಈ ವೇಳೆ ವಾಟರ್ ಟ್ಯಾಂಕ್, ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಘಟನೆ ಬಗ್ಗೆ ತನಿಖೆ ಶುರುವಾಗಿದೆ. ತನಿಖೆ ಪೂರ್ಣಗೊಂಡ ನಂತ್ರ ಸತ್ಯ ಹೊರಬರಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...