alex Certify
ಕನ್ನಡ ದುನಿಯಾ       Mobile App
       

Kannada Duniya

ವಧುವಿಗೆ ಮಾಲೆ ಹಾಕುವ ಬದಲು ವರ ಮಾಡಿದ್ದೇನು?

ಮದುವೆ ಸಮಾರಂಭದಲ್ಲಿ ಖುಷಿ ಮೇಳೈಸಿತ್ತು. ವಧು-ವರ ವೇದಿಕೆ ಮೇಲೆ ವರಮಾಲೆ ಶಾಸ್ತ್ರದಲ್ಲಿ ಬ್ಯುಸಿಯಿದ್ದರು. ವಧು, ವರನಿಗೆ ಮಾಲೆ ಹಾಕಿದ್ದಾಳೆ. ಆದ್ರೆ ವಧುವಿಗೆ ಮಾಲೆ ಹಾಕಬೇಕಿದ್ದ ವರ ಪಕ್ಕದಲ್ಲಿ ನಿಂತಿದ್ದ ಸ್ನೇಹಿತೆಗೆ ಮಾಲೆ ಹಾಕಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ. ಮಾರ್ಚ್ 26ರಂದು ಫೇಸ್ಬುಕ್ ನಲ್ಲಿ ಚಂದ್ರ ಸಿಂಗ್ ಎಂಬ ವ್ಯಕ್ತಿ ಈ ವಿಡಿಯೋ ಹಾಕಿದ್ದಾರೆ. ಈವರೆಗೆ 3 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ.

ಮದುವೆ ಸಮಾರಂಭಕ್ಕೆ ಬಂದ ವಧುವಿನ ಸ್ನೇಹಿತೆ ವರನ ತಲೆಗೆ ಅಕ್ಷತೆ ಹಾಕ್ತಿದ್ದಳು. ಆಕೆಗೆ ಮನಸೋತ ವರ ಮಧುವಿನ ಬದಲು ಆಕೆಗೆ ಮಾಲೆ ಹಾಕಿದ್ದಾನೆ. ಇದನ್ನು ನೋಡಿ ವಧುವೊಂದೇ ಅಲ್ಲ ಮದುವೆಗೆ ಬಂದವರೆಲ್ಲ ದಂಗಾಗಿದ್ದಾರೆ. ತಪ್ಪೊಪ್ಪಿಕೊಳ್ಳುವ ಬದಲು ವರ ಮಾತ್ರ ನಗ್ತಾ ನಿಂತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...