alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಲಿಗೆ ಕಾದ ಕಲ್ಲಿನ ಮೇಲೆ ರೆಡಿಯಾಯ್ತು ಆಮ್ಲೆಟ್

omlet telg

ದೇಶದ ಹಲವು ಭಾಗಗಳಲ್ಲಿ ಬಿಸಿಲ ಬೇಗೆ ಜೋರಾಗಿದ್ದು, ಜನ, ಜಾನುವಾರು ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನದಿಂದ ಜೀವನ ನಡೆಸುವುದೇ ದುಸ್ತರವಾಗಿದ್ದು, ಬಿಸಿಲ ಹೊಡೆತಕ್ಕೆ ಜನ ಕಂಗಾಲಾಗಿದ್ದಾರೆ.

ತೆಲಂಗಾಣದಲ್ಲಿ ಬಿಸಿಲ ಬೇಗೆಯಿಂದ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಕರೀಂನಗರ ಜಿಲ್ಲೆಯಲ್ಲಿ 40 ರಿಂದ 45 ಡಿಗ್ರಿ ತಾಪಮಾನ ಇದ್ದು, ಮನೆಯ ಮುಂದೆಯೇ ಮಹಿಳೆಯೊಬ್ಬಳು, ಕಾದ ಕಲ್ಲಿನ ಮೇಲೆ ಆಮ್ಲೆಟ್ ಮಾಡಿದ್ದಾಳೆ. ಮನೆಯ ಮುಂದೆ ಮೊಟ್ಟೆ ಸೇರಿದಂತೆ ಆಮ್ಲೆಟ್ ಮಾಡಲು ಬೇಕಾದ ಎಲ್ಲಾ ವಸ್ತು ರೆಡಿ ಮಾಡಿಕೊಂಡು ಕಾದ ಕಲ್ಲಿನ ಮೇಲೆ ಹಾಕಿ ಆಮ್ಲೆಟ್ ಮಾಡಿದ್ದಾಳೆ. ಇದನ್ನೆಲ್ಲಾ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಬಿಸಿಲಿನಲ್ಲಿ ಆಮ್ಲೆಟ್ ಮಾಡಿರುವ ಈ ದೃಶ್ಯವನ್ನು ಅಪಾರ ಜನ ವೀಕ್ಷಿಸಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶದಲ್ಲಿ ಬಿಸಿಲ ಕಾವು ವಿಪರೀತ ಹೆಚ್ಚಾಗಿದ್ದು, ವಿವಿಧ ಜಿಲ್ಲೆಗಳಲ್ಲಿ 40ರಿಂದ 45 ಡಿಗ್ರಿವರೆಗೆ ಉಷ್ಣಾಂಶ ಇದೆ. ಬಿಸಿಗಾಳಿಯೂ ಬೀಸುತ್ತಿದೆ. ಕರೀಂನಗರ ಜಿಲ್ಲೆಯಲ್ಲಿ ಮಹಿಳೆ ಕಾದ ಹಾಸುಗಲ್ಲಿನ ಮೇಲೆ ಆಮ್ಲೆಟ್ ಹಾಕಿದ ಘಟನೆ ಬಿಸಿಲಿನ ತೀವ್ರತೆಯನ್ನು ಬಿಂಬಿಸುವಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...