alex Certify
ಕನ್ನಡ ದುನಿಯಾ       Mobile App
       

Kannada Duniya

ವೋಟಿಗಾಗಿ ರಾಜಕಾರಣಿಗಳು ಹೀಗೂ ಮಾಡ್ತಾರೆ!!

hit-with-shoe-m

ರಾಜಕಾರಣಿಗಳು ವೋಟ್ ಗಾಗಿ ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಅಂದ್ರೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಜತ್ ಅಲಂ. ಮತಭಿಕ್ಷೆ ಕೇಳುವ ಭರದಲ್ಲಿ ಸುಜತ್ ಅಲಂ ತಮಗೆ ತಾವೇ ಬೂಟಿನಿಂದ ಹೊಡೆದುಕೊಂಡಿದ್ದಾರೆ. ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ರು.

ಈ ಬಾರಿ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದ್ರೆ ಜನರ ಆಶೋತ್ತರಗಳನ್ನೆಲ್ಲ ಈಡೇರಿಸುವುದಾಗಿ ಭರವಸೆ ನೀಡಿದ್ರು. ತಮ್ಮ ಕುರ್ತಾವನ್ನೇ ಮುಂದೊಡ್ಡಿ ಮತಭಿಕ್ಷೆ ಬೇಡಿದ್ರು. ಬಳಿಕ ತಮ್ಮಿಂದ ಏನಾದ್ರೂ ತಪ್ಪಾಗಿದ್ರೆ ಅದಕ್ಕೆ ಶಿಕ್ಷೆಯೂ ಆಗಲಿ ಅಂತಾ ಹೇಳುತ್ತ ಕಾಲಿನಲ್ಲಿದ್ದ ಬೂಟನ್ನು ತೆಗೆದುಕೊಂಡು ತಲೆಗೆ ಹೊಡೆದುಕೊಂಡಿದ್ದಾರೆ.

ಜನರಿಗಾಗಿ ಎಂತಹ ಶಿಕ್ಷೆ ಅನುಭವಿಸಲೂ ಸಿದ್ಧ ಅಂತೆಲ್ಲಾ ಹೇಳಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಸುಜತ್ ಅಲಂ ಸೋಲು ಅನುಭವಿಸಿದ್ರು, ಕೆಲವೇ ಮತಗಳ ಅಂತರದಲ್ಲಿ ಗೆಲುವು ಅವರ ಕೈತಪ್ಪಿತ್ತು. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಹಠ ತೊಟ್ಟಿರುವ ಸುಜತ್ ಅಲಂ ಅದಕ್ಕಾಗಿ ಹೈಡ್ರಾಮಾ ಮಾಡ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...