alex Certify
ಕನ್ನಡ ದುನಿಯಾ       Mobile App
       

Kannada Duniya

ಪವಾಡ ಸದೃಶವಾಗಿ ಪಾರಾದ ಮಹಿಳೆ

pavada

ಕೊಯಮತ್ತೂರು: ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಚಿಮ್ಮಿದ ಮಹಿಳೆ, ಪವಾಡ ಸದೃಶವಾಗಿ ಪಾರಾದ ಘಟನೆ ತಮಿಳುನಾಡಿನ ನಾಮಕ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

30 ವರ್ಷದ ಪ್ರಿಯಾ ಅಪಾಯದಿಂದ ಪಾರಾದವರು. ಸ್ಕೂಟಿಯಲ್ಲಿ ರಸ್ತೆ ಕ್ರಾಸ್ ಮಾಡುವಾಗ ಅತಿವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಪ್ರಿಯಾ ಮೇಲಕ್ಕೆ ಹಾರಿದ್ದಾರೆ.

ಈ ಭಯಾನಕ ದೃಶ್ಯ ಸಮೀಪದಲ್ಲೇ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಮೇಲಕ್ಕೆ ಹಾರಿ ಬಿದ್ದ ಪ್ರಿಯಾರನ್ನು ಸ್ಥಳೀಯರು ರಕ್ಷಿಸಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ಕಾರಣನಾದ ಕಾರ್ ಚಾಲಕ ಹರಿಹರನ್ ನನ್ನು ಬಂಧಿಸಲಾಗಿದೆ. ಹರಿಹರನ್ ಬೆಂಗಳೂರಿನ ಐ.ಟಿ. ಸಂಸ್ಥೆಯ ನೌಕರನಾಗಿದ್ದಾನೆ.

ಪ್ರಿಯಾ ಅವರಿಗೆ ಮೂಳೆ ಮುರಿದಿದ್ದು, ದೇಹದ ಕೆಲ ಭಾಗಗಳಿಗೆ ಪೆಟ್ಟು ಬಿದ್ದಿದೆ. ವೈದ್ಯರು ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...