alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಯನ್ನು ಬಚಾವ್ ಮಾಡಲು ಚಾಲಕ ಮಾಡಿದ್ದಾನೆ ಅದ್ಭುತ ಕಸರತ್ತು

driver-dog-video_759_twitter

ರೇಸ್ ಕಾರುಗಳನ್ನು ಡ್ರೈವ್ ಮಾಡೋದು ಸುಲಭದ ಕೆಲಸವಲ್ಲ. ಉಬ್ಬು ತಗ್ಗುಗಳುಳ್ಳ ಒರಟು ರಸ್ತೆಯಲ್ಲಿ ಕಾರು ಓಡಿಸೋದೇ ಒಂದು ದೊಡ್ಡ ಸವಾಲು. ರೇಸ್ ಕಾರು ಶರವೇಗದಲ್ಲಿ ಸಾಗುತ್ತಿದ್ದಾಗ ನಾಯಿಯೇನಾದ್ರೂ ಅಡ್ಡ ಬಂದ್ರೆ ದೊಡ್ಡ ದುರಂತ ಗ್ಯಾರಂಟಿ.

ಆದ್ರೆ ಭಾರೀ ಸಾಹಸ ಮಾಡಿ ಚಾಲಕನೊಬ್ಬ ನಾಯಿಯನ್ನು ಬಚಾವ್ ಮಾಡಿರೋ ವಿಡಿಯೋ ವೈರಲ್ ಆಗಿದೆ. ಅಲ್ಲಿ ಡರ್ಟ್ ರೇಸ್ ನಡೆಯುತ್ತಿತ್ತು. ಚಾಲಕ ಶರವೇಗದಲ್ಲಿ ಕಾರು ಓಡಿಸಿಕೊಂಡು ಬರ್ತಾ ಇದ್ದ. ಇದ್ದಕ್ಕಿದ್ದಂತೆ ನಾಯಿಯೊಂದು ಅಡ್ಡ ಬಂದಿದೆ.

ಚಾಲಾಕಿ ಚಾಲಕ ಕಾರನ್ನು ಜಂಪ್ ಮಾಡಿ ನಾಯಿಗೆ ಡಿಕ್ಕಿ ಹೊಡೆಯದಂತೆ ನೋಡಿಕೊಂಡಿದ್ದಾನೆ. ನಾಯಿ ಆರಾಮಾಗಿ ರಸ್ತೆ ದಾಟಿಕೊಂಡು ಹೋಗಿದೆ. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಸಾಕಷ್ಟು ಮಂದಿ ವೀಕ್ಷಿಸಿದ್ದು, ಚಾಲಕನಿಗೆ ‘ಡ್ರೈವರ್ ಆಫ್ ದಿ ಇಯರ್’ ಪ್ರಶಸ್ತಿ ಕೊಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...