alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಳ್ಳನ ದಡ್ಡತನ ಕಂಡು ನಕ್ಕು ಬಿಡ್ತೀರಿ….!

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಚಾಲಾಕಿ ಕಳ್ಳನೊಬ್ಬನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕೊಲಾಚೆಲ್ ಏರಿಯಾದಲ್ಲಿರೋ ಮೊಬೈಲ್ ಅಂಗಡಿಯೊಂದರಲ್ಲಿ ಕಳವು ಮಾಡಲು ಆತ ಸ್ಕೆಚ್ ಹಾಕಿದ್ದ.

ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿಕೊಂಡು ಅಂಗಡಿಯೊಳಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಯಾರಾದ್ರೂ ಗಮನಿಸುತ್ತಿದ್ದಾರಾ ಅಂತ ಸುತ್ತಲೂ ಕಣ್ಣುಹಾಯಿಸಿದ್ದಾನೆ. ಆತನ ಎಡಗೈ ಮೇಲಿರುವ ಹಚ್ಚೆ ಕೂಡ ಸ್ಪಷ್ಟವಾಗಿ ಗೋಚರಿಸಿದೆ.

ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿದ್ದ 1 ಲಕ್ಷ ರೂಪಾಯಿ ನಗದು ಎಗರಿಸಿ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದ. ಮರುದಿನ ಬೆಳಗ್ಗೆ ಅಂಗಡಿಯಲ್ಲಿ ಹಣ ಕಳವಾಗಿರೋದನ್ನು ನೋಡಿದ ಮಾಲೀಕ ಸಚಿನ್, ಸಿಸಿ ಟಿವಿ ದೃಶ್ಯವನ್ನು ಪರಿಶೀಲಿಸಿದ್ದಾನೆ.

ಅದರಲ್ಲಿ ಕಳ್ಳನ ಮುಖಚಹರೆ ಸ್ಪಷ್ಟವಾಗಿ ಗೋಚರಿಸಿತ್ತು. ಕೂಡಲೇ ಆತ ಪೊಲೀಸರಿಗೆ ದೂರು ಕೊಟ್ಟಿದ್ದ. ಕೆಲವೇ ಗಂಟೆಗಳಲ್ಲಿ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಮುಖ ಕಾಣುವಂತಹ ಕವರ್ ಧರಿಸಿದ ದಡ್ಡ ಕಳ್ಳನನ್ನು ನೋಡಿ ಎಲ್ಲರೂ ಆಡಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...