alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರಸ್ತೆ ನೋಡಿದ್ರೇ ದಂಗಾಗೋದು ಗ್ಯಾರಂಟಿ

guja road

ರಾಜಸ್ತಾನದಲ್ಲಿ ಕಾದ ಮರಳಿನಲ್ಲಿ ಯೋಧರು ಹಪ್ಪಳ ಸುಟ್ಟಿದ್ದ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಬಿಸಿಲಿನ ತೀವ್ರತೆಗೆ ಜನ ತತ್ತರಿಸಿ ಹೋಗಿರುವ ಗುಜರಾತ್ ನಲ್ಲಿಯೂ ಅದೇ ಪರಿಸ್ಥಿತಿ ಇದ್ದು, ಇಲ್ಲಿನ ರಸ್ತೆಗಳೇ ಕರಗಿ ಹೋಗುತ್ತಿವೆ.

ಗುಜರಾತ್ ನ ಗಾಂಧಿನಗರದ ವಲ್ಸದ್ ನಲ್ಲಿ ರಸ್ತೆಗಳಿಗೆ ಹಾಕಿರುವ ಟಾರ್ ಬಿಸಿಲ ಝಳಕ್ಕೆ ಕಾದು ಮೆಲ್ಟ್ ಆಗಿದ್ದು, ಈ ರಸ್ತೆಯಲ್ಲಿ ಪಾದಚಾರಿಗಳು ಓಡಾಡಲು ಕಷ್ಟವಾಗಿದೆ. ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಟಾರ್ ಕರಗುತ್ತಿರುವುದರಿಂದ ಪಾದಚಾರಿಗಳ ಚಪ್ಪಲಿ, ಶೂಗಳಿಗೆ ಟಾರ್ ಅಂಟಿಕೊಂಡು ಕೆಲವರು ನಡೆಯಲು ಸಾಧ್ಯವಾಗದೇ ರಸ್ತೆಯಲ್ಲೇ ಮುಗ್ಗರಿಸಿದ್ದಾರೆ. ಮಹಿಳೆಯೊಬ್ಬಳು ಕಾದ ರಸ್ತೆಯಲ್ಲಿ ದಾಟುವಾಗ ಬಿದ್ದು ಗಾಯಗೊಂಡಿದ್ದಾರೆ.

ಆಕೆ ಟಾರ್ ನಲ್ಲಿ ಚಪ್ಪಲಿ ಸಿಲುಕಿ ಒದ್ದಾಡಿದ್ದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. ಗಾಂಧಿನಗರದ ವಲ್ಸದ್ ನಲ್ಲಿ 36 ಡಿಗ್ರಿ ಉಷ್ಣಾಂಶವಿದೆ. ಅಹಮದಾಬಾದ್ ನಲ್ಲಿ 45 ಡಿಗ್ರಿ ಹಾಗೂ ರಾಜಸ್ತಾನದ ಚುರು ಎಂಬಲ್ಲಿ 49.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...